ಮೈಸೂರು,ಅಕ್ಟೋಬರ್,1,2020(www.justkannada.in): ಈ ಬಾರಿ ಸರಳ ಮತ್ತು ಸಾಂಪ್ರದಾಯಕವಾಗಿ ನಡೆಯುವ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಈಗಾಗಲೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವ ಗಜಪಡೆ ಸಾಂಸ್ಕೃತಿಕ ನಗರಿಯತ್ತ ಪ್ರಯಾಣಿಸಿದೆ.
ಈ ಬಾರಿ ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಲಿದ್ದು ಈ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ಜತೆ ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳು ಇಂದು ಮೈಸೂರಿಗೆ ಆಗಮಿಸುತ್ತಿದ್ದು ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ವಿವರ ಹೀಗಿದೆ ನೋಡಿ….
ಅಭಿಮನ್ಯು..
ಅಭಿಮನ್ಯುವಿಗೆ 54 ವರ್ಷ, ಮತ್ತಿಗೋಡು ಆನೆ ಶಿಬಿರದಲ್ಲಿದ್ದು ಈತನ ಎತ್ತರ 2.68 ಮೀಟರ್, ಆಂದಾಜು ತೂಕ 5000-5290 ಕೆಜಿ ಇದ್ದಾನೆ. ಅಭಿಮನ್ಯು ಆನೆಯನ್ನ 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು.
ವಿಕ್ರಮ…
ವಿಕ್ರಮ ಆನೆಗೆ 47 ವರ್ಷವಾಗಿದ್ದು ದುಬಾರೆ ಆನೆ ಶಿಬಿರದಲ್ಲಿದ್ದಾನೆ. ಈತನ ಆಂದಾಜು ತೂಕ 3820 ಕೆಜಿಯಷ್ಟಿದ್ದು, ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಇದು 16 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
ಗೋಪಿ…
ಗೋಪಿ ಆನೆಗೆ 38 ವರ್ಷ ವಯಸ್ಸಾಗಿದ್ದು, ಅಂದಾಜು 3710 ಕೆ.ಜಿ ತೂಕವಿದ್ದಾನೆ. ಈ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಗೋಪಿ ಆನೆ ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸ ನಿರ್ವಹಿಸುತ್ತಿದ್ದು, 10 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.
ವಿಜಯ…
ವಿಜಯ ಆನೆಗೆ 61 ವರ್ಷ ವಯಸ್ಸಾಗಿದ್ದು, 3250 ಕೆ.ಜಿ ತೂಕ ಹೊಂದಿದೆ. 1963ರಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿದ್ದು ಕಳೆದ 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.
ಕಾವೇರಿ….
ಕಾವೇರಿ ಆನೆಗೆ 42 ವರ್ಷ ವಯಸ್ಸಾಗಿದ್ದು, ಅಂದಾಜು ತೂಕ 3ಸಾವಿರದಿಂದ 3220ಕೆ.ಜಿಯಷ್ಟಿದೆ. ಈ ಆನೆಯನ್ನು ಸೋಮವಾರಪೇಟೆ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಇದು 9 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
Key words: mysore-dasara- details –gajapade-elephants