ಈ ಬಾರಿ ದಸರಾದಲ್ಲಿ ಹೆಚ್ಚುವರಿ ದೀಪಾಲಂಕಾರ: ವಿದ್ಯುತ್ ದೀಪಗಳಲ್ಲಿ ಜಗಮಗಿಸಲಿದ್ದಾರೆ ನಟ ಪುನೀತ್ ರಾಜಕುಮಾರ್

ಮೈಸೂರು ,ಸೆಪ್ಟಂಬರ್,15,2022(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ಕೆಲವೇ ದಿನಗಳ ಬಾಕಿಯಿದ್ದು ಸಕಲ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆಗೆ ಸರ್ಕಾರ ಮುಂದಾಗಿದ್ದು, ಅರಮನೆ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಜಗಮಗಿಸಲಿದೆ.

ಕಳೆದ ಸಾಲಿಗಿಂತ ಈ ಬಾರಿ ಹೆಚ್ಚುವರಿಯಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ದೀಪಾಲಂಕಾರ ವೀಕ್ಷಣೆಯ ಅವಧಿಯೂ ವಿಸ್ತರಣೆಯಾಗಲಿದೆ. ಈ ಕುರಿತು ಸಭೆ ಬಳಿಕ ಮಾತನಾಡಿ ಮಾಹಿತಿ ನೀಡಿದ ಸಂಸದ ಪ್ರತಾಪ್ ಸಿಂಹ, ಈ ಬಾರಿ ಒಟ್ಟು 124 ಕಿ ಮೀ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರವಿರಲಿದೆ. ಕಳೆದ ವರ್ಷ ನಿಧನರಾದ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿದ್ಯುತ್ ದೀಪಗಳಲ್ಲಿ ಜಗಮಗಿಸಲಿದ್ದಾರೆ. ಪುನಿತ್ ರಾಜಕುಮಾರ್ ಸೇರಿದಂತೆ 28 ವಿವಿಧ ಬಗೆಯ ಪ್ರತಿಕೃತಿಗಳು ಈ ಬಾರಿಯ ದಸರಾ ದೀಪಾಲಂಕಾರದ ಹೈಲೈಟ್ಸ್ ಆಗಿರಲಿವೆ ಎಂದು ತಿಳಿಸಿದರು.

ಇನ್ನು ರಾತ್ರಿ 7 ಗಂಟೆಯಿಂದ 10:30ರವರೆಗೂ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಅವಕಾಶವಿದ್ದು, ರಾತ್ರಿ 11ರವರೆಗೂ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ.  ಮೈಸೂರಿಗೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ವಿದ್ಯುತ್ ದೀಪಗಳಿಂದ ದ್ವಾರಗಳ‌ ನಿರ್ಮಾಣ,  ವಿಮಾನ ನಿಲ್ದಾಣದಿಂದ ಮೈಸೂರಿನವರೆಗೂ ವಿಶೇಷ ದೀಪಾಲಂಕಾರ ಮಾಡಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

Key words: mysore-dasara-Electric lighting-punith rajkumar

ENGLISH SUMMARY…

Additional lighting decoration in Mysuru this Dasara: Puneeth Rajkumar to shine in street light decoration
Mysuru, September 15, 2022 (www.justkannada.in): Preparations for the Dasara celebrations is going on in full swing in Mysuru. The State Government has stepped forward to conduct the Mysuru Dasara in a grand manner this year. Mysuru city will shine with lighting decoration.
Measures have been taken to undertake additional lighting decoration this year compared to last year. Even the timing of the lighting has been extended. MP Pratap Simha informed that lighting decoration will be done this year, in 124 km length of road. Special lightings arrangements will be made in 96 circles. Sandalwood’s powerstar Puneeth Rajkumar, who left us last year, will shine in the lights. Including Puneeth Rajkumar’s replica, 28 different replicas decorated in lights, will be part of Dasara lighting decoration this year.
The timing of lighting will be from 7.00 pm to 10.30 pm. Plans are made to extended the timing till 11.00 am. Arches in lights will be installed at all the entrances to the Mysuru city. Special lighting decoration will be made from the Airport to Mysuru city.
Keywords: Mysuru Dasara/ additional lighting decoration/ Puneeth Rajkumar