ಅನಧಿಕೃತ ರಸ್ತೆಬದಿ ವ್ಯಾಪಾರಸ್ಥರಿಂದ ತೊಂದರೆ, ಕಿರುಕುಳ ತಪ್ಪಿಸುವಂತೆ ಮನವಿ

ಮೈಸೂರು,ನವೆಂಬರ್,19,2024 (www.justkannada.in): ದಸರಾ ವಸ್ತುಪ್ರದರ್ಶನದಲ್ಲಿ ಅನಧಿಕೃತ ರಸ್ತೆಬದಿ ವ್ಯಾಪಾರಸ್ಥರಿಂದ ಪ್ರವಾಸಿಗರಿಗೆ ಗ್ರಾಹಕರಿಗೆ ಕಿರುಕುಳ, ತೊಂದರೆ ಆಗುತ್ತಿದ್ದು, ಇದನ್ನು ತಪ್ಪಿಸಬೇಕೆಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರಿಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮನವಿ  ಸಲ್ಲಿಸಲಾಯಿತು.

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ದೇಶವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ, ಮಳಿಗೆಗಳ ವ್ಯಾಪಾರಸ್ಥರು ಕೂಡ ಲಕ್ಷಾಂತರ ಹಣ ವ್ಯಯಿಸಿ 3ತಿಂಗಳು ವ್ಯಾಪಾರಕ್ಕೆಂದು ಶ್ರಮ ವಹಿಸುತ್ತಾರೆ, ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಎ ಬ್ಲಾಕ್,  ಚಾಮುಂಡಿ ಬ್ಲಾಕ್ ಮುಖ್ಯದ್ವಾರದ ಮುಂಭಾಗ ಸೇರಿದಂತೆ ವಸ್ತುಪ್ರದರ್ಶನದ ಬಹುತೇಕ ರಸ್ತೆಗಳಲ್ಲಿ ಅನಧಿಕೃತವಾಗಿ ರಸ್ತೆಬದಿ ವ್ಯಾಪಾರಸ್ಥರಿಂದ  ಗ್ರಾಹಕರು ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.

ಅನಧಿಕೃತ ರಸ್ತೆ ಬದಿ ವ್ಯಾಪರಸ್ಥರಿಂದ ಆಗುತ್ತಿರುವ ತೊಂದರೆ ಕಿರುಕುಳ ತಪ್ಪಿಸಲು  ಗಸ್ತಿನ ಪೋಲಿಸರು, ಭದ್ರತಾ ಸಿಬ್ಬಂದಿಗಳನ್ನ ನಿಯೋಜಿಸಬೇಕು.   ಈಬಗ್ಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು  ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ರವರು ಮನವಿ ಪತ್ರ ಸಲ್ಲಿಸಿದರು

ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್, ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಮಹಿಳಾ ಪ್ರಮುಖ ನಾಗಮಣಿ, ಚಕ್ರಪಾಣಿ, ದಯಾನಂದ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: mysore, Dasara exhibition, avoid trouble, unauthorized, roadside traders