ಮೈಸೂರು,ಅ,1,2019(www.justkannada.in): ಒಂದೆಡೆ ರೊಟ್ಟಿ ತಟ್ಟಿ ಚಟ್ನಿ ರುಬ್ಬಿದ ಗಂಡಹೆಂಡಿರು. ನಾಟಿಕೋಳಿ ಮುದ್ದೆ ತಿಂದು ಗೆದ್ದು ಬೀಗಿದ ಯುವಕ ಇದೆಲ್ಲಾ ಕಂಡು ಬಂದಿದ್ದು ಮೈಸೂರು ದಸರಾ ಮಹೋತ್ಸವದ ಆಹಾರ ಮೇಳದಲ್ಲಿ….
ಹೌದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ -2019 ಅಂಗವಾಗಿ ನಡೆಯುತ್ತಿರುವ ಆಹಾರ ಮೇಳದಲ್ಲಿ ದಂಪತಿಗಳಿಗೆ ರೊಟ್ಟಿ ಚಟ್ನಿ ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಗಂಡ ಹೆಂಡತಿಯರ ವಿಭಾಗದ ರಾಗಿ ರೊಟ್ಟಿ ಉಚ್ಚೆಳ್ ಚಟ್ನಿ ಮಾಡುವ ಸ್ಪರ್ಧೆಯಲ್ಲಿ 8 ಜೋಡಿಗಳು ಪಾಲ್ಗೊಂಡಿದ್ದವರು
ಸ್ಪರ್ದೇಯಲ್ಲಿ ಸಂಭ್ರಮದಿಂದಲೇ ಭಾಗವಹಿಸಿದ ಜೋಡಿಗಳು ವಿವಿಧ ರೀತಿಯ ರಾಗಿ ರೊಟ್ಟಿ, ಚಟ್ನಿ ತಯಾರಿಸಿದರು. ರೊಟ್ಟಿ ಚಟ್ನಿ ಮಾಡಲು ಒಂದು ಗಂಟೆ ಕಾಲಾವಕಾಶ ನೀಡಲಾಗಿತ್ತು. ಶುಚಿತ್ವ, ರುಚಿ, ಬಳಸಿದ ಪದಾರ್ಥಗಳು, ಸೇಫ್ಟಿ ಪ್ರಿಪ್ರೇಷನ್ ಗೆ ಐದು -ಐದು ಅಂಕ ನಿಗದಿ ಮಾಡಲಾಗಿತ್ತು.
ಆಹಾರ ಮೇಳದಲ್ಲಿ ನಾಟಿಕೋಳಿ ಮುದ್ದೆ ತಿನ್ನುವ ಸ್ಪರ್ಧೆ..
ಅದೇ ರೀತಿ ಆಹಾರ ಮೇಳದಲ್ಲಿ ನಾಟಿಕೋಳಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. 200 ಗ್ರಾಂ ತೂಕದ ಮೂರು ಮುದ್ದೆ ಹಾಗೂ 50 ಗ್ರಾಂ ನಾಟಿ ಕೋಳಿ ತಿನ್ನಲು ಎರಡು ನಿಮಿಷ ಕಾಲಮಿತಿ ನೀಡಲಾಗಿತ್ತು. ಸ್ಪರ್ಧೆಯಲ್ಲಿ ಹತ್ತು ಜನರು ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಡ್ಯ ಜಿಲ್ಲೆಯ ಯುವಕ ವೆಂಕಿ ಕೇವಲ 58 ಸೆಕೆಂಡ್ ನಲ್ಲಿ ಮೂರು ಮುದ್ದೆ 50 ಗ್ರಾಂ ನಾಟಿಕೋಳಿ ತಿಂದು ಮೊದಲ ಬಹುಮಾನ ಪಡೆದರು. ಶಿವಾನಂದ್ ಎರಡನೇ ಬಹುಮಾನ ಶಿವಣ್ಣ ಮೂರನೇ ಬಹುಮಾನ ಪಡೆದರು.
Key words: mysore dasara- food festival- Couple –ragi mudde -contest