ಮೈಸೂರು,ಅಕ್ಟೋಬರ್,28,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯನ್ನ ಯಶಸ್ವಿಯಾಗಿ ನಡೆಸಿದ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಇಂದು ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಲಿವೆ.
ಇಂದು ಅರಣ್ಯ ಇಲಾಖೆಯಿಂದ ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ ಆಯೋಜಿಸಲಾಗಿದ್ದು, ಕ್ಯಾಫ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಯಶಸ್ವಿಯಾಗಿ ದಸರಾ ಮುಗಿಸಿದ ಬಳಿಕ ಇದೀಗ ಸ್ವಸ್ಥಾನಕ್ಕೆ ವಾಪಾಸ್ ಆಗುತ್ತಿವೆ. ಇಂದು ನಾಡಿನಿಂದ ಮತ್ತೆ ಕಾಡನತ್ತ ಅಭಿಮನ್ಯು ಅಂಡ್ ಟೀಮ್ ಹೆಜ್ಜೆ ಹಾಕಲಿವೆ.
ಕೊರೋನಾ ಹಿನ್ನೆಲೆ ಈ ಬಾರಿ ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದ್ದು ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದನು. ಈ ಬಾರಿ 400 ಮೀಟರ್ ಗಷ್ಟೇ ಜಂಬೂ ಸವಾರಿ ಮೆರವಣಿಗೆ ಸೀಮಿತವಾಗಿತ್ತು.
Key words: mysore dasara-gajapade-captain-abhimanyu-team-forest