ಮೈಸೂರು,ಅಕ್ಟೋಬರ್,3,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ 2020 ಅರಮನೆಗೆ ಸೀಮಿತವಾಗಿದ್ದು ಜಂಬೂಸವಾರಿ ಸಹ ಅರಮನೆ ಆವರಣದಲ್ಲೇ ನಡೆಯಲಿದೆ. ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು ದಸರಾ ಮುಗಿಯುವವರೆಗೂ ಅರಮನೆ ಬಿಟ್ಟು ಹೊರಗಡೆ ಹೋಗುವ ಆಗಿಲ್ಲ.
ಹೌದು, ಪ್ರತಿ ವರ್ಷ ದಸರಾ ಗಜಪಡೆ ಆನೆಗಳಿಗೆ ರಾಜಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಜಂಬೂಸವಾರಿ ಸಹ ಅರಮನೆ ಆವರಣದಲ್ಲೇ ನಡೆಯಲಿದ್ದು ಇಲ್ಲೇ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಈ ನಡುವೆ ಆನೆಗಳ ಬಳಿ ಸಾರ್ವಜನಿಕ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ.
ಇಂದು ಅರಮನೆಯಲ್ಲಿ ಅಭಿಮನ್ಯು ಅಂಡ್ ಟೀಂ ರಿಲ್ಯಾಕ್ಸ್ ನಲ್ಲಿದ್ದು, ಮಾವುತರು. ಆನೆಗಳಿಗೆ ಸ್ನಾನ ಮಾಡಿಸಿ ಮೈತೊಳೆದರು . ಈ ನಡುವೆ ಇಂದು ಬೆಳಗ್ಗೆ ಆನೆಗಳಿಗೆ ವಾಕಿಂಗ್ ಮಾಡಿಸಲಾಯಿತು. ಇಂದು ಸಂಜೆ ಮಾವುತರು ಮತ್ತೊಂದು ಸುತ್ತು ಆನೆಗಳಿಗೆ ವಾಕಿಂಗ್ ಮಾಡಿಸಲಿದ್ದಾರೆ. ನಾಳೆಯಿಂದ ಗಜಪಡೆ ತಾಲೀಮು ಆರಂಭಿಸಲಿವೆ. ಇನ್ನು ದಸರಾ ಗಜಪಡೆಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಮಾವುತರು ಭತ್ತ, ಬೆಲ್ಲ, ಹುಲ್ಲಿನ ಮಿಶ್ರಿತ ಕುಸುರಿ ನೀಡುತ್ತಿದ್ದಾರೆ.
ಅರಮನೆ ಅವರಣದಲ್ಲಿ ಕೊರಾನಾ ಮುಂಜಾಗ್ರತಾ ಕ್ರಮ……
ಅರಮನೆ ಅವರಣದಲ್ಲಿ ಕೊರಾನಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅರಮನೆ ಆವರಣದಲ್ಲಿ ಡಿಸ್ಇನ್ಫೆಕ್ಷನ್ ಸಿಂಪಡಣೆ ಮಾಡಲಾಗಿದೆ. ಗಜಪಡೆ ಓಡಾಡುವ ಮಾರ್ಗದಲ್ಲಿ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿಗಳು ಸ್ಯಾನಿಟೈಸಿಂಗ್ ಮಾಡಿದ್ದು, ದಸರಾ ಮುಗಿಯುವವರೆಗು ಆನೆಗಳು ಅರಮನೆ ಹೊರಗೆ ಹೋಗುವಂತಿಲ್ಲ. ಜತೆಗೆ ಆನೆಗಳ ಬಳಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇನ್ನು ಮಾವುತರು ಕಾವಾಡಿಗಳಿಗೆ ಪ್ರತ್ಯೇಕ ಕ್ಯಾಟರಿಂಗ್ ವ್ಯವಸ್ಥೆ ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುತ್ತದೆ.
Key words: mysore dasara-gajapade-palace-corona-No entry- outside