ಮೈಸೂರು,ಅಕ್ಟೋಬರ್,8,2021(www.justkannada.in): ಯಶಸ್ವಿಯಾಗಿ ನಮ್ಮ ಆನೆಗಳು ಫಿರಂಗಿ ತಾಲೀಮು ಮುಗಿಸಿವೆ. ವಿಕ್ರಮ ಆನೆಗೆ ಮದಬಂದಿದ್ದು ಆ ಆನೆಯನ್ನ ದಸರಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿಲ್ಲ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 15 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಸರಾ ಗಜಪಡೆಯ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ಡಿಸಿಎಫ್ ಕರಿಕಾಳನ್, ನಮಗೆ ಜಂಬೂಸವಾರಿಗೆ ಐದು ಆನೆಗಳು ಸಾಕು. ಆದರೆ ನಾವು 8 ಆನೆಗಳು ತಂದಿದ್ದು ನಗರದ ವಾತಾವರಣಕ್ಕೆ ಹೊಂದಿಕೊಳ್ಳಬೇಕೆಂದು. ಕೊನೆ ಹಂತದಲ್ಲಿ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದೇವೆ. ವಿಕ್ರಮ ಆನೆಗೆ ಮದಬಂದಿದ್ದು ಆ ಆನೆಯನ್ನ ದಸರಾ ಕಾರ್ಯಕ್ರಮಕ್ಕೆ ಬಳಸಿಕೊಳ್ತಿಲ್ಲ. ಈ ರೀತಿಯ ಸಮಸ್ಯೆ ಆಗುವ ಕಾರಣ ಮೂರು ಆನೆ ಹೆಚ್ಚವರಿಯಾಗಿ ತಂದಿದ್ದೇವೆ. ಅಭಿಮನ್ಯು ಹೆಲ್ತ್ ಚೆನ್ನಾಗಿದೆ. ಅಕ್ಕಪಕ್ಕ ಎರಡು ಹೆಣ್ಣಾನೆ ಬಳಕೆ ಆಗುತ್ತೆ. ನಿಶಾನೆ ಆನೆ, ನೌಪತ್ ಆನೆ ಸೇರಿ ಒಟ್ಟು 5 ಆನೆ ಜಂಬೂಸವಾರಿಗೆ ಸಾಕು. ನಮಗೆ ಆನೆಗಳಿಂದ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ.
ಈವರೆಗಙೂ 1250 ಕೆಜಿ ವರೆಗು ತೂಕದ ತಾಲೀಮ ನಡೆಸಿದ್ದೇವೆ. ಜಂಬೂಸವಾರಿಗೆ ಸಮಸ್ಯೆ ಆಗದಂತೆ ಸ್ಟ್ಯಾಂಡ್ ಬೈ ಆನೆ ಇದೆ. ಲಕ್ಷ್ಮಿ ಹಾಗೂ ಧನಂಜಯ ಆನೆ ಇಂದು ಫಿರಂಗಿಗೆ ಬೆದರಿದೆ. ಧನಂಜಯ ಆನೆ ಎಲ್ಲದಕ್ಕೂ ಒಕೆ. ಆದರೆ ಫಿರಂಗಿ ಸದ್ದಿಗೆ ಮಾತ್ರ ಬೆದರುತ್ತಿದ್ದಾನೆ. ಆದರೆ ದಸರಾ ಕಾರ್ಯಕ್ರಮದ ಸದ್ದಿಗೆ ಧನಂಜಯ ಬೆದರೊಲ್ಲ. ನಾಳೆ ಬೆಳಗ್ಗೆ ಶ್ರೀರಂಗಪಟ್ಟಣ ದಸರಾಗೆ ಎರಡು ಆನೆ ಕಳುಹಿಸುತ್ತೇವೆ. ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆಯನ್ನ ಮೈಸೂರಿನಿಂದ ಕಳುಹಿಸುತ್ತೇವೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
Key words: mysore dasara- gajapade-workout- DCF Karikalan