ಮೈಸೂರು,ಅಕ್ಟೋಬರ್,28,2020(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020 ವಿಜಯದಶಮಿ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ನಾಡಿನಿಂದ ಕಾಡಿನತ್ತ ಪಯಣ ಬೆಳೆಸಿವೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ದಸರಾ ಗಜಪಡೆಗೆ ಪೂಜೆ ನೆರವೇರಿಸಿ ಬಿಳ್ಕೋಡಲಾಯಿತು. ದಸರಾ ಗಜಪಡೆ ಹೊರಡುವ ಮುನ್ನಾ ಕ್ಯಾಫ್ಟನ್ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.
ದಸರಾ ಗಜಪಡೆ ಲಾರಿಗಳನ್ನೇರಿ ಆನೆ ಶಿಬಿರಗಳತ್ತ ತೆರಳುತ್ತಿವೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ 2 ರಂದು ಹುಣಸೂರಿನ ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ದಸರಾ ಗಜಪಡೆ ಇದೀಗ ಮೈಸೂರು ದಸರಾ ಜಂಬೂ ಸವಾರಿ ಯಶಸ್ವಿಗೊಳಸಿ ಕಾಡಿನತ್ತ ಹೆಜ್ಜೆ ಹಾಕಿವೆ.
Key words: mysore dasara-gajapde-captain-abhimanyu-elephant-worship-forest