2ನೇ ದಿನವೂ ದಸರಾ ಗಜಪಡೆಗೆ ಭಾರ ಹೊರುವ ತಾಲೀಮು: ಅರಮನೆ ಆವರಣದಲ್ಲಿ ಇಂದು ಫಿರಂಗಿ ರಿಹರ್ಸಲ್.

ಮೈಸೂರು,ಸೆಪ್ಟಂಬರ್,21,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ.

ಎರಡನೇ ದಿನವೂ ಗಜಪಡೆಗೆ ಭಾರ ಹೊರುವ ತಾಲೀಮು ನಡೆದಿದ್ದು, ಇಂದು ಧನಂಜಯ ಅನೆಗೆ  ಸುಮಾರು 400 ಕೆ.ಜಿ‌ ಭಾರ ಹೊರಿಸಿ ತಾಲೀಮು ನಡೆಸಲಾಯಿತು.  ಧನಂಜಯಗೆ ಕುಮ್ಕಿ ಆನೆಗಳಾದ ಚೈತ್ರಾ, ಲಕ್ಷ್ಮೀ ಆನೆಗಳು ಸಾಥ್ ನೀಡಿದವು. ನಾಳೆ ನಾಳೆ ಗೋಪಾಲಸ್ವಾಮಿಗೆ ಭಾರದ ತಾಲೀಮು ನಡೆಯಲಿದ್ದು  ಮೂರ್ನಾಲ್ಕು ದಿನಗಳ ಬಳಿಕ ಮತ್ತಷ್ಟು ಭಾರ ಹೆಚ್ಚಿಸಿ ತಾಲೀಮು ನಡೆಸಲಾಗುತ್ತದೆ.

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆಮಾಡಿದ್ದು, ಅರಮನೆ ಆವರಣದಲ್ಲಿ ಇಂದು ಫಿರಂಗಿ ರಿಹರ್ಸಲ್ ನಡೆಯಲಿದೆ. ಜಂಬೂಸವಾರಿ ವೇಳೆ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ 21 ಕುಶಾಲತೋಪು ಸಿಡಿಸಲಾಗುತ್ತದೆ. ನಿಗದಿತ ಸಮಯದಲ್ಲಿ 21 ಕುಶಾಲತೋಪು ಸಿಡಿಸಲು ಪ್ರತಿವರ್ಷ ರಿಹರ್ಸಲ್ ನಡೆಸಲಾಗುತ್ತದೆ. ಅಂತೆಯೇ ಅರಮನೆ ಆವರಣದಲ್ಲಿ ಇಂದಿನಿಂದ ಡ್ರೈ ಪ್ರಾಕ್ಟೀಸ್ ನಡೆಯಲಿದ್ದು, ಸಿಎಆರ್ ನ 15 ಕ್ಕೂ ಹೆಚ್ಚು ಸಿಬ್ಬಂದಿಗಳು ರಿಹರ್ಸಲ್ ನಲ್ಲಿ ಭಾಗಿಯಾಗಲಿದ್ದಾರೆ. ಐದಾರು ದಿನಗಳಲ್ಲಿ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಹಾಗೂ ಕುದುರೆಗಳು ಬೆದರದಂತೆ ತಾಲೀಮು ಸಹ ನಡೆಯಲಿದೆ. ತಾಲೀಮಿಗೆ 7 ಫಿರಂಗಿ ಗಾಡಿಗಳ ಬಳಕೆ ಮಾಡಲಾಗುತ್ತಿದೆ.

Key words: mysore –dasara- gajapde-workout -Artillery rehearsa- today