ಮೈಸೂರು,ಸೆಪ್ಟಂಬರ್,2,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಕುರಿತು ನಾಳೆ ಬೆಂಗಳೂರಿನಲ್ಲಿ ಹೈ ಪವರ್ ಕಮಿಟಿಯ ಮೊದಲ ಸಭೆ ನಡೆಯಲಿದೆ.
ನಾಳೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ದಸರಾದ ಪ್ರಮುಖ ರೂಪುರೇಷಗಳ ಬಗ್ಗೆ ನಾಳೆ ಸಭೆಯಲ್ಲಿ ಚರ್ಚೆಯಾಗಲಿದೆ.
ಈ ಬಾರಿಯ ದಸರಾ ಸರಳವೂ,ಪಾರಂಪರಿಕವೂ, ಇಲ್ಲ ಸಂಭ್ರಮದ ದಸರಾ ಆಚರಣೆಯೊ, ಕಳೆದ ಬಾರಿಯಂತೆ ಈ ಬಾರಿಯೂ ಜಂಬೂ ಸವಾರಿ ಅರಮನೆ ಅವರಣಕ್ಕೆ ಮಾತ್ರ ಸೀಮಿತವಾಗಲಿದ್ಯಾ ಎಂಬುದು ನಾಳೆ ನಿರ್ಧಾರವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಹೈಪವರ್ ಕಮಿಟಿ ಮೀಟಿಂಗ್ ನತ್ತ ಇದೆ.
Key words: Mysore Dasara- High Power Committee- meeting -tomorrow -evening.