ಇದು ನನ್ನ ಜೀವಿತಾವಧಿಯ ದೊಡ್ಡ ಗೌರವ : ಈ ಸಾಲಿನ ದಸರ ಉದ್ಘಾಟಕ ಡಾ. ಮಂಜುನಾಥ್ ಹರ್ಷ.

 

ಬೆಂಗಳೂರು, ಅ.10, 2020 : (www.justkannada.in news) : ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವದ ಉದ್ಘಾಟಕನಾಗಿ ನನ್ನನ್ನು ರಾಜ್ಯ ಸರಕಾರ ಆಯ್ಕೆ ಮಾಡಿರುವುದು ನನ್ನ ಜೀವಿತಾವಧಿಯ ದೊಡ್ಡ ಗೌರವ. ಜತೆಗೆ ಇದು ವೈದ್ಯಕೀಯ ಕ್ಷೇತ್ರಕ್ಕೆ, ಕರೋನಾ ವಾರಿಯರ್ಸ್ ಗೆ ಸಂದ ಮಾನ್ಯತೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. C.N.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ಈ ಸಾಲಿನ ದಸರ ಮಹೋತ್ಸವ ಉದ್ಘಾಟನೆಗೆ ರಾಜ್ಯ ಸರಕಾರ ಕರೋನಾ ವಾರಿಯರ್ ಡಾ. ಸಿ.ಎನ್.ಮಂಜುನಾಥ್ ಅವರನ್ನು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಡಾ.ಮಂಜುನಾಥ್ ಅವರನ್ನು ‘ ಜಸ್ಟ್ ಕನ್ನಡ ‘ ಮಾತನಾಡಿಸಿತು. ವಿವರ ಹೀಗಿದೆ.

mysore-dasara-2020-gajapayana-captain-abhimanyu-team

ನಾಡ ಹಬ್ಬ ದಸರ ಮಹೋತ್ಸವ ರಾಜ್ಯದ ಅತ್ಯಂತ ಪ್ರತಿಷ್ಠಿತ ಉತ್ಸವ. ದೇಶ, ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಿರುವ ದಸರ ಮಹೋತ್ಸವದ ಉದ್ಘಾಟಕನಾಗಿ ನಾನು ಆಯ್ಕೆಗೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಜತೆಗೆ ಇದು ಇಡೀ ವೈದ್ಯಕೀಯ  ಕ್ಷೇತ್ರಕ್ಕೆ ರಾಜ್ಯ ಸರಕಾರ ತೋರಿಸಿದ ಗೌರವ.

ರಾಜ್ಯ ಸರಕಾರ, ಕರೋನ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ದಸರ ಆಚರಣೆಗೆ ನಿರ್ಧರಿಸಿರುವುದು ಅರ್ಥಪೂರ್ಣ. ಉತ್ಸವದ ಜತೆಗೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ನೀಡಿರುವ ಶಿಫಾರಸ್ಸು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಏಕೆಂದರೆ ದಸರ ಮಹೋತ್ಸವವೆಂದು ಜನ ಗುಂಪುಗೂಡಿ ಅದರಿಂದ ಅನಾಹುತ ಸಂಭವಿಸಬಾರದು. ಆದ್ದರಿಂದ ಕೋವಿಡ್ ಮಾರ್ಗಸೂಚಿ ಪ್ರಕಾರವೇ ದಸರ ಮಹೋತ್ಸವ ನಡೆಸಬೇಕಾಗಿದೆ.

Mysore-dasara-inauguration-dr.mamjunath-its-my-pleasure-heart-doctor-jayadeva-hospital-Bangalore

ಸದ್ಯಕ್ಕೆ ಇನ್ನು ಕರೋನಾಗೆ ಔಷಧ ಕಂಡು ಹಿಡಿದಿಲ್ಲವಾದ್ದರಿಂದ, ಮಾಸ್ಕ್ ಧರಿಸುವುದೇ ಸೂಕ್ತ ಪರಿಹಾರ. ಅದರಲ್ಲೂ ಮಾಸ್ಕ್ ಅನ್ನು ಸರಿಯಾದ ರೀತಿ ಧರಿಸಬೇಕು. ಮೂಗಿಂದ ಕೆಳಗಡೆ ಹಾಕಿಕೊಂಡರೆ , ಮಾತನಾಡುವಾಗ ಮಾಸ್ಕ್ ತೆಗೆದರೆ ಅದರಿಂದ ಪ್ರಯೋಜನವಾಗದು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಹ ಅಷ್ಟೆ ಮುಖ್ಯವಾಗುತ್ತದೆ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟರು.

 

key words : Mysore-dasara-inauguration-dr.mamjunath-its-my-pleasure-heart-doctor-jayadeva-hospital-Bangalore