ಈ ಪರಾಕ್ರಮ ನೋಡಿದ್ರೆ ಜಿ.ಟಿ ದೇವೇಗೌಡ ಮುಡಾ ಫಲಾನುಭಾವಿ ಇರಬೇಕು- ಹೆಚ್.ವಿಶ್ವನಾಥ್ ಕಿಡಿ

ಮೈಸೂರು,ಅಕ್ಟೋಬರ್,4,2024 (www.justkannada.in): ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ  ಶಾಸಕ ಜಿಟಿ ದೇವೇಗೌಡರ ಭಾಷಣ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಪರಿಷತ್ ಸದಸ್ಯ ವಿಶ್ವನಾಥ್, ಜಿ‌ಟಿ ದೇವೇಗೌಡರ ಭಾಷಣ ಅಬ್ಬಾ ಅಬ್ಬಾ. ಈ ಪರಾಕ್ರಮ ನೋಡಿದ್ರೆ ಜಿ. ಟಿ ದೇವೇಗೌಡ ಮುಡಾ ಫಲಾನುಭಾವಿ ಇರಬೇಕು ಎಂದು ಕಿಡಿಕಾರಿದ್ದಾರೆ.

ಇಂದು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್,  ದಸರಾ ಸಭೆಯ ಪಾವಿತ್ರ್ಯತೆ ಹಾಳಾಗಿದೆ. ದಸರಾ ಉದ್ಘಾಟನೆ ವೇದಿಕೆ ರಾಜಕೀಯ ನಾಯಕರ ವೇದಿಕೆ ಆಗಿತ್ತು. ದಸರಾ ಉದ್ಘಾಟಕರು ಕೂಡ ರಾಜಕೀಯ ಭಾಷಣ ಮಾಡಿದರು. ಇಡೀ ಕಾರ್ಯಕ್ರಮ ಹೊಲಸು ಕಾರ್ಯಕ್ರಮ ಆಗೋಯ್ತು. ಚಾಮುಂಡಿ ಮಹಿಮೆ, ಜನರ ಸಹಕಾರ ದ ಮಾತುಗಳೇ ಇರಲಿಲ್ಲ.ಇನ್ನೆಂದು ದಸರಾ ಉದ್ಘಾಟನೆ ಕಾರ್ಯಕ್ರಮವೇ ಬೇಡ ಅನಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನಾನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ರು. ಜಿ‌ಟಿ ದೇವೇಗೌಡ ಭಾಷಣ ಅಬ್ಬಾ ಅಬ್ಬಾ. ಈ ಪರಾಕ್ರಮ ನೋಡಿದ್ರೆ ಜಿ ಟಿ ದೇವೇಗೌಡ ಮುಡಾ ಫಲನುಭಾವಿ ಇರಬೇಕು ಇಡೀ ಕಾರ್ಯಕ್ರಮವನ್ನು ಜಿ. ಟಿ ದೇವೇಗೌಡ ಹಾಳು ಮಾಡಿದ. ಇಡೀ ದಸರಾ ಕಾರ್ಯಕ್ರಮವನ್ನು ರಾಜಕೀಯ ನುಂಗಿದೆ. ಸರ್ಕಾರ ಬೀಳಿಸುವ ಮಾತು ಯಾರು ಆಡಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಕುಣಿಯುತ್ತಿರುವುದು. 14 ಸೈಟ್ ರಾಜಭವನ, ಹೈ ಕೋರ್ಟ್, ಲೋಕಾಯುಕ್ತ ಎಲ್ಲವನ್ನೂ ಬಳಸಿದೆ. ಅಯ್ಯೋ ದೇವರ ನಾಗಪ್ರಸನ್ನರವರ ತೀರ್ಪು ನ್ನು ಒಮ್ಮೇ ಓದಿ. ಇಡಿ ತನಿಖೆಗೆ ಎಂಟ್ರಿ ಅದ ಮೇಲೆ ಭಾವನತ್ಮಾಕ ಕಾಗದದ  ಮೂಲಕ 14 ಸೈಟ್ ಹಿಂದುರಿಗಿಸಿದ್ದಾರೆ ಎಂದು ಪರಿಷತ್ ಸದಸ್ಯ ವಿಶ್ವನಾಥ್ ಟೀಕಿಸಿದರು.

Key words: mysore dasara, Inauguration, politics, H.Vishwanath