ಮೈಸೂರು,ಅಕ್ಟೋಬರ್,7,2021(www.justkannada.in): ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕಳೆಗುಂದಿದೆ. ಮುಂದಿನ ವರ್ಷ ಅದ್ದೂರಿಯಾಗಿ ದಸರಾ ಮಾಡಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಚಾಲನೆ ನೀಡಿದರು. ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಡದೇವತೆ ಆಶೀರ್ವಾದದೊಂದಿಗೆ ನಾಡನ್ನು ಸುಭೀಕ್ಷವಾಗಿ ಇಡುವ ಅವಕಾಶ ಸಿಕ್ಕಿದೆ. ಎಲ್ಲರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಅವಕಾಶವನ್ನು ತಾಯಿ ಚಾಮುಂಡೇಶ್ವರಿ ಕೊಟ್ಟಿದ್ದಾಳೆ. ನಾಡಹಬ್ಬ ಜನರಲ್ಲಿ ಉತ್ಸಾಹ ತುಂಬುವಂತಾಗಬೇಕು. ಮಳೆ, ಬೆಳೆ, ಸುಖ, ಸಮೃದ್ಧಿ ಇರುವಂತಾಗಬೇಕು. ಕೋವಿಡ್ ತೊಲಗಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದೇನೆ. ಜನರಿಗೆ ಏನಾದರೂ ಕಷ್ಟು ಕೊಡುವುದಿದ್ದರೆ ಆ ಕಷ್ಟವನ್ನೆಲ್ಲ ನನಗೆ ಕೊಡಲಿ. ಆ ಕಷ್ಟ ಸಹಿಸುವ ಶಕ್ತಿ ಕೊಡಲಿ ಅಂತಲೂ ಪ್ರಾರ್ಥಿಸಿದ್ದೇನೆ ಎಂದರು.
ದಸರಾ ಹಬ್ಬ ವೇಳೆಯಲ್ಲಿ ಸಭೆ ಜರುಗಿತು. ಐದು ಕೋಟಿ ಅಲ್ಲ ಆರು ಕೋಟಿ ಕೊಡುತ್ತೇನೆ ಎಂದೇಳಿದೆ, ಅದೇ ರೀತಿ ಕೊಡಲಾಗಿದೆ. ಸಭೆಯಲ್ಲಿ ಉದ್ಘಾಟಕರಾಗಿ ಯಾರು ಎಂಬ ಚರ್ಚೆಯಾಯಿತು. ಆಗ ನಿರ್ಧಾರ ತೆಗೆದುಕೊಳ್ಳಲು ಕೆಲ ಸಮಯ ತೆಗೆದುಕೊಂಡಿದ್ದು ನಿಜ. ಆದರೆ ಆಗಲೇ ನಾನು ನಿರ್ಧರಿಸಿದ್ದೆ ಎಸ್ ಎಂ ಕೃಷ್ಣ ಅವರನ್ನೇ ಉದ್ಘಾಟಕರಾಗಬೇಕು ಎಂದು ಬಯಸಿದ್ದೆ. ಅದೇ ರೀತಿ ಮೈಸೂರು ದಸರಾ ಉದ್ಘಾಟನೆ ಮಾಡಿದ್ದಾರೆ. ಎಸ್ ಎಂ ಕೆ ಅವರಿಗೆ ದೊಡ್ಡ ಸ್ವಾಗತ ಸಿಕ್ಕಿರುವುದು ಜನರ ಒಪ್ಪಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Key words: mysore dasara- innuagration-chamundi hills- CM Basavaraja Bommai