ಮೈಸೂರು,ಅಕ್ಟೋಬರ್,5,2022(www.justkannada.in): ಮೈಸೂರು ದಸರಾ ಮಹೋತ್ಸವ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಆದರೆ ಶುಭ ಘಳಿಗೆ ಮೀರಿದ ನಂತರ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ಸಂಜೆ 5.07 ರಿಂದ 5.18ರಲ್ಲಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಬೇಕಿತ್ತು. ಆದರೆ ೫.೩೮ ಕ್ಕೆ ಕ್ಕೆ ಪುಷ್ಪಾರ್ಚಣೆ ಮಾಡಿ ಚಾಲನೆ ನೀಡಿದರು. ಪುಷ್ಪಾರ್ಚಣೆ ವೇದಿಕೆಯಲ್ಲಿ 8 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಪುಷ್ಪಾರ್ಚಣೆ ಬಳಿಕ ರಾಷ್ಟ್ರ ಗೀತೆ ಹಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಜಂಬೂಸವಾರಿ ಮೆರವಣಿಗೆ ವೇಳೆ ಕಂಡು ಬಂದ ಅವ್ಯವಸ್ಥೆ.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗಿತ್ತು. ಹೀಗಾಗಿ ಈ ಬಾರಿ ಅದ್ಧೂರಿ ದಸರಾ ಆಚರಣೆ ಹಿನ್ನೆಲೆ ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಲು ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಆದರೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೆ ಅವ್ಯವಸ್ಥೆ ಎದ್ದು ಕಂಡು ಬಂದಿತ್ತು. ಕಲಾತಂಡಗಳು ಸ್ತಬ್ಧಚಿತ್ರಗಳು ಹೋಗಬೇಕಾದರೇ ಕಮಿಟಿ ಸದಸ್ಯರು, ಮೆರವಣಿಗೆ ಸಮಿತಿಗಳ ಸದಸ್ಯರು. ಫೋಟೋ ಗ್ರಾಫರ್ಸ್ ಗಳೇ ನೂರಾರು ಸಂಖ್ಯೆಯಲ್ಲಿ ಓಡಾಡುತ್ತಿದ್ದರು . ಹೀಗಾಗಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರಿಗೆ ಜಂಬೂ ಸವಾರಿ ಮೆರವಣಿಗೆಯನ್ನ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಜೊತೆಗೆ ಅಲ್ಲಿ ಓಡಾಡುತ್ತಿದ್ದವರನ್ನ ನಿಯಂತ್ರಿಸುವಲ್ಲಿ ಪೊಲೀಸರೂ ಸಹ ವೈಪಲ್ಯರಾಗಿದ್ದರು.
Key words: mysore dasara-jambo savari-cm -bommai