ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ: ಜನರ ಮನಸೂರೆಗೊಳಿಸುವ ಕಲಾತಂಡಗಳ ಪ್ರದರ್ಶನ…

ಮೈಸೂರು,ಅ,8,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿರುವ ಜನರನ್ನ ಕಲಾತಂಡಗಳ ನೃತ್ಯ ,ಪ್ರದರ್ಶನ ಮನಸೂರೆಗೊಳಿಸುತ್ತಿವೆ.

ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದು ನಿಶಾನೆ ಮತ್ತು ನೌಪತ್ ಆನೆಗಳು ಜಂಬೂ ಸವಾರಿ ಮೆರವಣಿಗೆ ಸಾಗಿವೆ. ಈ ನಡುವೆ ಅರ್ಜುನನಿಗೆ ಅಂಬಾರಿ ಕಟ್ಟುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಜಂಬೂ ಸವಾರಿ ಮೆರವಣಿಗೆಗಳಲ್ಲಿ  38 ಸ್ತಬ್ಧಚಿತ್ರಗಳು 50 ಕಲಾತಂಡಗಳು ಜನರ ಕಣ್ಮನ ಸೆಳೆಯಲಿವೆ.

ದೇವರಾಜು ತಂಡದಿಂದ ಪೂಜಾಕುಣಿತ,  ವೀರಯ್ಯ ಆಂಜನೇಯ ಅವರಿಂದ ಕೋಲಾಟ, ವೀರಮದಕರಿ ನಾಯಕರ ಸಂಘದಿಂದ  ದೊಣ್ಣೆವರಸೆ, ಸಿದ್ಧರಾಜು ಅವರಿಂದ ಮರಗಾಲುಕುಣಿತ, ಸಿ. ಮಂಜುನಾಥ್ ಅವರಿಂದ  ತಮಟೆ ನಗಾರಿ, ಮಹಾರಾಷ್ಟ್ರ ತಂಡದಿಂದ  ಡಾಂಗ್ರಿಗಜ ಹೀಗೆ ಮುಂತಾದ ಕಲಾ ತಂಡಗಳು ತಮ್ಮ ಅದ್ಬುತ ಪ್ರದರ್ಶನವನ್ನ ಜಂಬೂ ಸವಾರಿ ಮೆರವಣಿಗೆಯುದ್ದಕ್ಕೂ ನೀಡುತ್ತಿವೆ.

ಜನಪದ ಕಲಾತಂಡಗಳ ಪೈಕಿ, ಕಂಸಾಳೆ, ಪೂಜಾಕುಣಿತ, ಡೊಳ್ಳುಕುಣಿತ, ಗೊರವ ಕುಣಿತ, ವೀರಗಾಸೆ, ವೀರಭದ್ರ ಕುಣಿತ, ಕೀಲುಕುದುರೆ ಸೇರಿದಂತೆ ಇತರೇ ತಂಡಗಳ ಪ್ರದರ್ಶನ ಆಕರ್ಷಣೆ ತರಿಸಿವೆ. ಇದರೊಂದಿಗೆ, ಅಮರೇಶ್ ಹಾಗೂ ವಿ.ರಾಮಾಂಜನೇಯ ಅವರಿಂದ ಹಗಲುವೇಷವೂ ಅನಾವರಣಗೊಂಡಿದೆ.

ರಾಜ್ಯ ವಿವಿಧ ಮೂಲಗಳಿಂದ ಸಾಂಸ್ಕೃತಿಕ ಕಲಾತಂಡಗಳು ಆಗಮಿಸಿದ್ದು, ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆ ಡೊಳ್ಳು ಕುಣಿತ, ಡಕ್ಕ ಕುಣಿತ, ಕೋಲಾಟ, ಲಂಬಾಣಿಕುಣಿತ, ಕರಡಿ ಮಜಲು ಮುಂತಾದ ಕಲೆಗಳ ಪ್ರದರ್ಶನವಾಗಲಿದೆ.

 

Key words: mysore dasara- jamboo savari- Art teams