ಮೈಸೂರು,ಅಕ್ಟೋಬರ್,5,2022(www.justkannada.in): ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ಸಿಕ್ಕಿದ್ದು ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ನಾಡದೇವಿ ತಾಯಿ ಚಾಮುಂಡೇಶ್ವರಿಯನ್ನ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು.
ಅರಮನೆ ಒಳಾಂಗಣದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 3ನೇ ಬಾರಿ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಸಾಥ್ ನೀಡುತ್ತಿವೆ. ಜಂಬೂ ಸವಾರಿ ಮೆರವಣಿಗೆಯೂ ಕೆ.ಆರ್ ಸರ್ಕಲ್ , ಸಯ್ಯಾಜಿರಾವ್ ರೋಡ್ ಆಯುರ್ವೇದಿಕ್ ವೃತ್ತ, ಆರ್ ಎಂಸಿ , ತಿಲಕ್ ನಗರದ ಮೂಲಕ ಸಾಗಿ ಬನ್ನಿಮಂಟಪ ಸೇರಲಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ನಾಡ ಸಂಸ್ಕೃತಿಯನ್ನ ಬಿಂಬಿಸುವ 47 ಸ್ತಬ್ಧಚಿತ್ರಗಳು ಹಾಗೂ ವಿವಿಧ ನೃತ್ಯ ಕಲಾತಂಡಗಳು ನೋಡುಗರ ಕಣ್ಮನ ಸೆಳೆದವು. ಜಂಬೂ ಸವಾರಿ ಮೆರವಣಿಗೆಯನ್ನ ಲಕ್ಷಾಂತರ ಜನ ನೋಡಿ ಕಣ್ತುಂಬಿಕೊಂಡರು.
Key words: mysore dasara- jamboo savari-Captain- Abhimanyu