ಮೈಸೂರು,ಅಕ್ಟೋಬರ್,12,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದು ಈ ಮೆರವಣಿಗೆಯಲ್ಲಿ 49 ಸ್ತಬ್ಧಚಿತ್ರಗಳು ಜನರ ಕಣ್ಮನ ಸೆಳೆಯಲಿವೆ.
ಇಂದು ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆಹಾಕಲಿದ್ದಾನೆ. ಈ ಜಂಬೂಸವಾರಿ ಮೆರವಣಿಗೆಯಲ್ಲಿ ಕಲಾತಂಡಗಳು ಸ್ತಬ್ಧಚಿತ್ರಗಳು ವಿಶೇಷ ಮೆರಗು ಹೆಚ್ಚಿಸಲಿವೆ.
ಸ್ತಬ್ದಚಿತ್ರಗಳು 31 ಜಿಲ್ಲೆಗಳ ಕಲೆ ಸಾಹಿತ್ಯ, ಸಂಸ್ಕೃತಿ, ಅಚಾರ ವಿಚಾರ ಬೌಗೋಳಿಕ ಹಿನ್ನೆಲೆ ಸಾರಲಿವೆ. ರಾಜ್ಯ ಕೇಂದ್ರ ಸರ್ಕಾರದ ಇಲಾಖಾವಾರು ಸ್ತಬ್ದಚಿತ್ರ ರಾಜ್ಯ ಸರ್ಕಾರದ ಯೋಜನೆ ಸಾಧನೆಗಳ ಕುರಿತ ಸ್ತಬ್ದ ಚಿತ್ರಗಳೂ ಮೆರವಣಿಗೆಯಲ್ಲಿ ಆಕರ್ಷಿಸಲಿವೆ.
Key words: Mysore Dasara, Jamboosawari, 49 tablo