ಮೇಳೈಸಿದ ಸ್ತಬ್ದಚಿತ್ರ, ಕಲಾತಂಡಗಳ, ಪ್ರದರ್ಶನ: ದಸರಾ ವೈಭವ ಕಣ್ತುಂಬಿಕೊಂಡ ಜನಸಾಗರ

ಮೈಸೂರು,ಅಕ್ಟೋಬರ್,12,2024 (www.justkannada.in): ಸಾಂಸ್ಕೃತಿಕ ಸುಗ್ಗಿ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಸಾಗುತ್ತಿದ್ದು ಅಂಬಾರಿ ಹೊತ್ತು ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಾನೆ.  ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಕಲೆ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕಲಾತಂಡಗಳು, ಸ್ತಬ್ದಚಿತ್ರಗಳ ಪ್ರದರ್ಶನ ನೋಡುಗರ ಮನಸೂರೆಗೊಂಡಿದೆ.

ಇಂದು ನಡೆಯುತ್ತಿರುವ ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿದ್ದು, ದಸರಾ ವೈಭವವನ್ನ ಕಣ್ತುಂಬಿಕೊಂಡಿದ್ದಾರೆ.  ಅರಮನೆಯಲ್ಲಿ  ಜಂಬೂ ಸವಾರಿ ಮೆರವಣಿಗೆ ಚಾಲನೆ ಸಿಕ್ಕ ನಂತರ ಜಯಚಾಮರಾಜ ವೃತ್ತ,  ಕೆಆರ್ ವೃತ್ತ,  ಸಯ್ಯಾಜಿ ರಾವ್ ರಸ್ತೆ,  ಅಯುರ್ವೇದಿಕ್ ವೃತ್ತ,  ತಿಲಕ್ ನಗರ,  ಆರ್ ಎಂಸಿ ವೃತ್ತ, ಬಂಬೂ ಬಜಾರ್, ಹೈವೇ ರೋಡ್,  ಮೂಲಕ ಜಂಬೂಸವಾರಿ ಮೆರವಣಿಗೆ  ಸಾಗುತ್ತಿದ್ದು ಬನ್ನಿ ಮಂಟಪದಲ್ಲಿ ಕೊನೆಗೊಳ್ಳಲಿದೆ.

ಅಂಬಾರಿ ಹೊತ್ತು ಕ್ಯಾ. ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು, ಕಲಾತಂಡಗಳು ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದು, ಹೆಜ್ಜೆ ಹೆಜ್ಜೆಗೂ ನೆರೆದಿದ್ದ ಜನರು  ದಸರಾ ವೈಭವ ನೋಡಿ ಕಣ್ತುಂಬಿಕೊಂಡರು.

Key words: mysore Dasara, jambusavari, cultural, tablo, crowd