ಮೈಸೂರು,ಅಕ್ಟೋಬರ್,22,2020(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದ್ದು, ಕೊರೋನಾ ಹಿನ್ನೆಲೆ ಈ ಬಾರಿ ಜಂಬೂ ಸವಾರಿ ಅರಮನೆ ಅವರಣಕ್ಕೆ ಸೀಮಿತವಾಗಿ ನಡೆಯಲಿದೆ.
ಜಂಬೂ ಸವಾರಿಗೆ ಇನ್ನು ನಾಲ್ಕು ದಿನವಷ್ಟೇ ಬಾಕಿ ಇದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ, ಅಶ್ವರೋಹಿ ಪಡೆಗೆ ಇಂದು ತಾಲೀಮು ನಡೆಸಲಾಗುತ್ತಿದೆ. ಈ ಮಧ್ಯೆ ಇಂದು ಅರಮನೆ ಆವರಣದಲ್ಲಿ ಜಂಬೂ ಸವಾರಿ ತಾಲೀಮು ವೇಳೆ ಕುದುರೆ ಬೆದರಿ ಅಶ್ವವನ್ನ ಮುನ್ನಡೆಸುತ್ತಿದ್ದ ಪೊಲೀಸ್ ಪೇದೆ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.
ಜಂಬೂ ಸವಾರಿಯಲ್ಲಿ ಅಶ್ವರೋಹಿ ಪಡೆ ಭಾಗಿಯಾಗಲಿದ್ದು, ಅಂಬಾರಿಗೆ ರಕ್ಷಣಾ ಪಡೆಯಾಗಿ ಅಶ್ವದಳ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಇಂದು ಸಂಪ್ರದಾಯದಂತೆ ಅಶ್ವದಳ ತಾಲೀಮಿನಲ್ಲಿ ಭಾಗಿಯಾಗಿತ್ತು. ಈ ಸಮಯದಲ್ಲಿ ಕುದುರೆ ಬೆದರಿ ಪೊಲೀಸ್ ಪೇದೆ ಕೆಳಕ್ಕೆ ಬಿದ್ಧ ಘಟನೆ ನಡೆಯಿತು.
ಇನ್ನು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ, ಅಶ್ವರೋಹಿ ಪಡೆ, ಪೊಲೀಸ್ ಬ್ಯಾಂಡ್ ವೃಂದ ಅಂತಿಮ ಹಂತದ ಸಿದ್ದತೆಯಲ್ಲಿ ತೊಡಗಿವೆ.
Key words: mysore dasara-jumbo riding- workout -Frightened -horse –police-fell down.