ಮೈಸೂರು,ಅಕ್ಟೋಬರ್,9,2021(www.justkannada.in): ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ನಗರದಲ್ಲಿ ಜಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಬರುವವರಿಗೆ ಸಿಹಿಸುದ್ದಿ ಸಿಕ್ಕಿದ್ದು ಇಂದಿನಿಂದ ರಾತ್ರಿ 10.30ರವರೆಗೂ ದೀಪಾಲಂಕಾರದ ವಿದ್ಯುತ್ ದೀಪಗಳು ಬೆಳಗಲಿವೆ.
ದೀಪಾಲಂಕಾರ ನೋಡಲು ವೀಕ್ಷಕರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದೀಪಾಲಂಕಾರದ ಸಮಯ ವಿಸ್ತರಣೆ ಮಾಡಲಾಗಿದೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ವಿದ್ಯುತ್ ದೀಪಾಲಂಕಾರ ರಾತ್ರಿ 11 ಗಂಟೆವೆರೆಗೂ ಇರಲಿದೆ.
ಪ್ರತಿ ವರ್ಷ ಸಂಜೆ 6.30 ರಿಂದ ರಾತ್ರಿ 8.30 ವರೆಗೆ ಮಾತ್ರ ಲೈಟ್ಸ್ ಆನ್ ಮಾಡಲುತ್ತಿತ್ತು. ಈ ಬಾರಿ ರಾತ್ರಿ 9.30 ವರೆಗೂ ದೀಪಾಲಂಕಾರ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಹಾಗಾಗಿ ದೀಪಾಲಂಕಾರದ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಯಿಂದ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ದೀಪಾಲಂಕಾರ ವೀಕ್ಷಣೆ ಮಾಡಲು ಬರುವವರು ಇಂದಿನಿಂದ ಸಂಜೆ 6.30 ರಿಂದ ರಾತ್ರಿ 10.30 ರ ವರೆಗೂ ದಸರಾ ದೀಪಾಲಂಕಾರದ ಸೊಬಗು ಸವಿಯಬಹುದಾಗಿದೆ.
Key words: mysore –dasara-lighiting- today- till -10.30 pm.
ENGLISH SUMMARY..
Mysuru Dasara: Lighting till 10.30 pm
Mysuru, October 9, 2021 (www.justkannada.in): Here is some good news for those who visit Mysuru to enjoy the colorful lighting arrangement as part of the Dasara celebrations. The timings of the decorative lighting have been extended till 10.30 pm.
Following a heavy rush to see the attractive lighting arrangements resulting in a traffic jam, the timings have been extended. On Ayudha Puja and Vijayadashami festival days, it will be till 11.00 pm.
Every year the timings of lightings were from 6.30 pm to 8.30 pm. This year it was decided to extend it till 9.30 pm. However, following heavy rush, the timings have been further extended according to the information provided by Cesc Managing Director Jayavibhaswami.
Keywords: Mysuru Dasara/ celebrations/ lighting arrangement/ timings extended