ಮೈಸೂರು ದಸರಾ ಮಹೋತ್ಸವ: ವೀರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ.

ಮೈಸೂರು,ಸೆಪ್ಟಂಬರ್,13,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಈ ನಡುವೆ ಇಂದು ಗಜ ಪಯಣಕ್ಕೆ ಚಾಲನೆ ದೊರೆತಿದೆ.

ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸರಳ ಗಜಪಯಣಕ್ಕೆ ಚಾಲನೆ ದೊರೆತಿದ್ದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ.  ದಸರಾ ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಭಾಗಿಯಾಗಲಿವೆ.

ಕೊರೊನಾ ನಡುವೆ ಸಾಂಪ್ರದಾಯಿಕ ದಸರಾ ಆಚರಣೆಗೆ ಇಂದು ಚಾಲನೆ ದೊರೆತಿದ್ದು, ಜಂಬೂಸವಾರಿ ಕ್ಯಾಪ್ಟನ್ 56 ವರ್ಷದ ಅಭಿಮನ್ಯು ನೇತೃತ್ವದ ಗಜಪಡೆ ಇಂದು ನಾಡಿನತ್ತ ಹೆಜ್ಜೆ ಹಾಗುತ್ತಿವೆ. ಇಂದು ಸಂಜೆ ಲಾರಿ ಮೂಲಕ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಗಜಪಡೆ ಆಗಮಿಸಲಿದ್ದು, ಅಕ್ಟೋಬರ್ 16 ರಂದು ಅರಮನೆಗೆ ಗಜಪಡೆ ಎಂಟ್ರಿಯಾಗಲಿವೆ. ಈ ವೇಳೆ ಜಿಲ್ಲಾಡಳಿತ ವತಿಯಿಂದ ಗಜಪಡೆಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಸ್ವಾಗತಿಸಲಾಗುತ್ತದೆ.

ಇನ್ನು ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು 34 ವರ್ಷದ ಅಶ್ವತ್ಥಾಮ  ಆಗಮಿಸುತ್ತಿದ್ದಾನೆ. 58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರ, 20 ವರ್ಷದ ಲಕ್ಷ್ಮಿ ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ.

ENGLISH SUMMARY…

Mysuru Dasara Mahotsav: ‘Gajapayana’ commences from Veeranahosahalli
Mysuru, September 13, 2021 (www.justkannada.in): The State Government has decided to celebrate the Mysuru Dasara Mahotsav in a simple manner this year also. In the meantime the ‘Gajapayana’ commenced from Veeranahosahalli today.
All the 8 elephants that have been selected to take part in the Jamboo Savari this year were offered pooja traditionally at Veeranahosahalli in Hunsur Taluk, as usual. There are totally 5 male and 3 female elephants in this year’s procession elephants list.
The elephant herd led by the 56-year-old Captain Abhimanyu left for the cultural capital of the state Mysuru today from Veeranahosahalli. The herd will reach the Aranya Bhavan in Ashokpuram, Mysuru today evening in lorries. The elephant herd will enter the Ambavilasa Palace on October 16. The elephants will be welcomed by the District Administration which has made arrangements to offer the traditional pooja rituals.
The 34-year-old Ashwathama is taking part in the Jamboo Savari this year for the first time. The other elephants in the herd include Vikrama (58 years), Dhananjaya (43), Kaveri (44), Chaitra (48), Lakshmi (20).
Keywords: Mysuru Dasara Mahotsav/ Gajapade/ elephants/ Veeranahosahalli

Key words: Mysore- Dasara Mahotsav -Gajapayana –hunsur-Veeranahosalli.