ಮೈಸೂರು,ಸೆಪ್ಟಂಬರ್,8,2021(www.justkannada.in): ಕೊರೋನಾ ಹಿನ್ನೆಲೆ ಈ ಬಾರಿಯೂ ಸರಳವಾಗಿ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು ಈ ಬಾರಿಯ ದಸರಾದಲ್ಲಿ ಎಂಟು ಆನೆಗಳು ಭಾಗಿಯಾಗಲಿವೆ.
16 ರ ಪಟ್ಟಿಯಲ್ಲಿ 8 ಆನೆಗಳ ಆಯ್ಕೆ ಖಚಿತವಾಗಿದ್ದು, 8 ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಆನೆಗಳ ಪಟ್ಟಿಯನ್ನ ಪ್ರಕಟ ಮಾಡಲಿದ್ದಾರೆ. ದಸರಾ ಆನೆಗಳ ಪಟ್ಟಿ ಹಾಗೂ ಆನೆಗಳ ಬಗ್ಗೆ ತಯಾರಿಸಿರುವ ಕೈಪಿಡಿಯನ್ನ ಇಂದು ಬಿಡುಗಡೆ ಮಾಡಲಾಗುತ್ತದೆ.
ಇನ್ನು ಸೆಪ್ಟಂಬರ್ 13ರಂದೇ ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ ಎನ್ನಲಾಗುತ್ತಿದ್ದು, ಸೆಪ್ಟಂಬರ್ 16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆ ಎಂಟ್ರಿ ಕೊಡಲಿದೆ. ಕ್ಯಾಪ್ಟನ್ ಅಭಿಮನ್ಯು ತನ್ನ ತಂಡದೊಂದಿಗೆ ಎಂಟ್ರಿ ಕೊಡಲಿದ್ದಾನೆ.
ಕೊರೊನಾ ಕಾರಣ ಈ ಬಾರಿಯೂ ಸರಳ, ಸಂಪ್ರದಾಯಿಕ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಅಂಗಳಕ್ಕಷ್ಟೇ ದಸರಾ ಸೀಮಿತವಾಗಲಿದೆ. ಸೆ.10 ರ ನಂತರ ಮೈಸೂರಿಗೆ ಗಜಪಯಣದ ಮೂಲಕ ಆನೆಗಳನ್ನ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ.
ಡಿಸಿಎಫ್ ಕರಿಕಾಳನ್ ಆನೆ ಶಿಬಿರಕ್ಕೆ ಭೇಟಿ ಕೊಟ್ಟು 16 ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಪಟ್ಟಿ ತಯಾರಿಸಿ, ಬೆಂಗಳೂರಿನ ಪಿಸಿಸಿಎಫ್ ಕಚೇರಿಗೆ ರವಾನಿಸಿದ್ದರು.ಇದೀಗ ಅಭಿಮನ್ಯು ನೇತೃತ್ವದಲ್ಲಿ 8 ಆನೆ ಬಳಸಿಕೊಳ್ಳಲು ಪಿಸಿಸಿಎಫ್ ಅನುಮತಿ ನೀಡಿದ್ದಾರೆ.
ಕಳೆದ ವರ್ಷದ ದಸರಾಗೆ ಮೂರು ಗಂಡಾನೆ, ಎರಡು ಹೆಣ್ಣಾನೆಯನ್ನಷ್ಟೇ ಕರೆತರಲಾಗಿತ್ತು. ಈ ಬಾರಿ ಎರಡು ಗಂಡಾನೆ ಹಾಗೂ ಒಂದು ಹೆಣ್ಣಾನೆಯನ್ನು ಹೆಚ್ಚುವರಿಗೆ ಕರೆ ತರಲಾಗುತ್ತದೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಸ್ಥಾನ ಪಡೆಯುವುದು ಖಚಿತವಾಗಿದೆ.
ENGLISH SUMMARY…
Mysuru Dasara Mahotsava: Decision to bring 8 elephants led by Abhimanyu
Mysuru, September 8, 2021 (www.justkannada.in): The State Government has decided to celebrate the world-famous Mysuru Dasara Mahotsav in a simple manner. As a result of this, it is decided to rope in eight elephants for the celebrations.
Eight out of the total 16 elephants have been selected to take part in the Mysuru Dasara celebrations and the Forest Department has decided to bring them to Mysuru. Mysuru District In-charge Minister S.T. Somashekar will announce the names of these elephants soon. The list of elephants and a handbook will be released today.
The ‘Gajapayana’ from Veerahoshalli in Hunsur will commence on September 13 and it will arrive at the Ambavilasa Palace in Mysuru on September 16. Abhimanyu will be the captain.
DCF Karikalan visited the elephant camp to check the health condition of all the 16 elephants and had prepared a list of 8 selected elephants and had forwarded the details to the Office of the PCCF in Bengaluru. Following this, the PCCF has selected 8 elephants, under the captainship of Abhimanyu.
Last year only three male and two female elephants had participated in the Dasara celebrations. This time two male and one female elephant have been added to that list. There will be 5 male and 3 female elephants.
Keywords: Mysuru Dasara Mahotsav/celebrations/ simple/ 8 elephants
Key words: mysore- Dasara Mahotsav – Mysore-decided -8 elephants – Captain Abhimanyu.