ಮೈಸೂರು,ಅಕ್ಟೋಬರ್,27,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಗಿದ್ದಿದ್ದು ಈ ಹಿನ್ನೆಲೆ ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರು ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಧನ್ಯವಾದ ತಿಳಿಸಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೊರೊನಾ ವಾರಿಯರ್ಸ್ ನಿಂದ ದಸರಾ ಉದ್ಘಾಟನೆಯಾಗಿದ್ದು ಐತಿಹಾಸಿಕ ಸಂಗತಿ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯಹಿಸಿವೆ. ಸ್ಥಳೀಯ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಎಂ.ಪಿ ಪ್ರತಾಪ್ ಸಿಂಹ ಎಲ್ಲರೂ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿಗಳು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಿಗೆ ಶುಭ ಸಂದೇಶ ನೀಡಿದ್ದಾರೆ. ದಸರಾ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸುವುದಾಗಿ ಹೇಳಿದರು.
9 ದಿನದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿದೆ. ಟೆಕ್ನಿಕಲ್ ಕಮಿಟಿ ಮಾರ್ಗಸೂಚಿ ಪ್ರಕಾರ ಯಶಸ್ವಿಯಾಗಿದೆ. ನಾನು ದಸರಾಗೆ ಹೊಸಬ, ಮೊದಲ ದಿನದಿಂದಲೂ ಸಾರ್ವಜನಿಕರ ಸಹಕಾರ ಚೆನ್ನಾಗಿತ್ತು. ಆದ್ದರಿಂದ ಈ ಬಾರಿಯ ಯಶಸ್ಸಿಗೆ ಕಾರಣರಾದ ಇವೆರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನವೆಂಬರ್ 1ರಂದು ದಸರಾ ಖರ್ಚು ವೆಚ್ಚದ ಸಂಪೂರ್ಣ ಲೆಕ್ಕ ನೀಡುತ್ತೇನೆ…
7 ಲಕ್ಷಕ್ಕೂ ಅಧಿಕ ಆನ್ಲೈನ್ ನಲ್ಲಿ ದಸರಾ ವೀಕ್ಷಿಸಿದ್ದಾರೆ. ದಸರಾ ಆಚರಣೆಗೆ ಸರ್ಕಾರ 10 ಕೋಟಿ ಅನುದಾನ ನೀಡಿತ್ತು. ಮುಡಾದಿಂದ 5ಕೋಟಿ ಹಣ ನೀಡಲಾಗಿತ್ತು. ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ. ನವೆಂಬರ್ 1ರಂದು ದಸರಾ ಖರ್ಚು ವೆಚ್ಚದ ಸಂಪೂರ್ಣ ಲೆಕ್ಕ ನೀಡುತ್ತೇನೆ. ಕಳೆದ ಬಾರಿಯ ಉಳಿಕೆ ಹಣವನ್ನ ರಾಜ್ಯಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆ. ಈ ಬಾರಿಯ ಉಳಿಕೆ ಹಣಕ್ಕೆ ನಾನು ಜವಬ್ದಾರಿ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದರು.
ನಗರದ ಲೈಟಿಂಗ್ ನಾಳೆಯಿಂದ ತೆರವು...
ದಸರಾ ಹಿನ್ನೆಲೆ ನಗರದಲ್ಲಿ ಹಾಕಲಾಗಿರುವ ಲೈಟಿಂಗ್ ಅನ್ನ ನಾಳೆಯಿಂದ ತೆರವುಗೊಳಿಸಲಾಗುತ್ತೆ. ಆಯ್ದ ಕೆಲವು ಭಾಗಗಳಲ್ಲಿ ಮಾತ್ರ ಕನ್ನಡ ರಾಜೋತ್ಸವದ ವರೆಗೂ ದೀಪಾಲಂಕಾರ ಮುಂದುವರೆಯಲಿದೆ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.
Key words: mysore dasara- Minister- ST Somashekhar -thanked – people -contribution