ಮೈಸೂರು,ಸೆ,5,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ದಸರಾ ಉಪಸಮಿತಿಗಳ ಸಭೆ ನಡೆಸಿ ಚರ್ಚಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ 2019 ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ವಿ,ಸೋಮಣ್ಣ ನೇತೃತ್ವದಲ್ಲಿ ಮೈಸೂರು ಜಿಲ್ಲಾಪಂಚಾಯಿತ್ ಆವರಣದಲ್ಲಿ ಉಪಸಮಿತಿಗಳ ಸಭೆ ಆಯೋಜಿಸಲಾಗಿತ್ತು. 16 ಉಪಸಮಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ಸಿಂಹ ಭಾಗಿಯಾಗಿದ್ದರು.
ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರೇತರರನ್ನ ಸಮಿತಿಯಲ್ಲಿ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಉಪ ಸಮಿತಿ ರಚನೆ ವಿಚಾರ ಸಂಬಂಧ ಕೂಡಲೇ ಉಪಸಮಿತಿ ರಚನೆ ಮಾಡ್ತೇವೆ. ಸೆಪ್ಟಂಬರ್ I2ವರೆಗೂ ಇಲ್ಲೇ ಇದ್ದು ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡುತ್ತೇನೆ. ನಾಳೆಯಿಂದಲೇ ಉಪ ಸಮಿತಿಯ ಸದಸ್ಯರು ಕೆಲಸ ನಿರ್ವಹಣೆ ಮಾಡಲಿದ್ದಾರೆ. ದಸರಾ ಉದ್ಘಾಟನೆಗೆ ಏನು ತೊಂದರೆ ಆಗಲ್ಲ , ಎಲ್ಲ ಸುಸೂತ್ರವಾಗಿ ನಡೆಸುತ್ತೇವೆ ಎಂದು ತಿಳಿಸಿದರು.
Key words: Mysore Dasara- minister- V. Somanna – subcommittee-meeting