ಮೈಸೂರು ದಸರಾ: ಸಕಲ ಸಂಪ್ರದಾಯಗಳೊಂದಿಗೆ ಅರಮನೆಯ ಧಾರ್ಮಿಕ ಕಾರ್ಯ ಸಂಪನ್ನ.

ಮೈಸೂರು,ಅಕ್ಟೋಬರ್,15,2021(www.justkannada.in):  ಜಗತ್ಪ್ರಸಿದ್ಧ ಮೈಸೂರು ಅರಮನೆಯ ವಿಜಯದಶಮಿ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಕಲ ಸಂಪ್ರದಾಯಗಳೊಂದಿಗೆ ಸಂಪನ್ನಗೊಂಡಿತು.

ಪಟ್ಟದ ಆನೆ, ಕುದುರೆ, ಹಸುಗಳು, ಒಂಟೆ 5.45ಕ್ಕೆ ಅರಮನೆ ಒಳಾವರಣಕ್ಕೆ ಆಗಮಿಸಿದವು. 6.13ರಿಂದ 6.32ರವರೆಗೆ ಕಾಸಾ ಆಯುಧಗಳಿಗೆ ಪೂಜಾ ಕೈಂಕರ್ಯ ನಡೆಯಿತು.

ನಂತರ ಯದುವೀರ್‌ರಿಂದ ಉತ್ತರ ಪೂಜೆ ನಡೆದು, ಬಳಿಕ ಅರಮನೆಯ ಚಾಮುಂಡಿ ದೇವಿಯ ವಿಗ್ರಹವನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಯಿತು. ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಿ 7.20ರಿಂದ 7.40ರವರೆಗೆ ವಿಜಯ ಯಾತ್ರೆ ಆರಂಭವಾಯಿತು.

ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಕೈಗೊಂಡು ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನೆರವೇರಿಸಿದರು.

ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ  ಒಡೆಯರು ಪೂಜೆ ಸಲ್ಲಿಸಿದರು. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್​​ ಆಗಿ‌ ಕಂಕಣ ವಿಸರ್ಜನೆ ಮಾಡುವ ಮೂಲಕ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಂಪನ್ನಗೊಂಡವು.

Key words: Mysore Dasara –palace- religious- worship- traditions-yadvir krishnadatta chamaraj wodeyar

ENGLISH SUMMARY….

Mysuru Dasara: Dasara traditional rituals inside the palace completed
Mysuru, October 15, 2021 (www.justkannada.in): All the rituals that take place in the Ambavilasa Palace before commencing the world-famous Jambu Savari have been completed.
The palace elephant, horses, and livestock were brought to the palace at 5.45 am. The Ayudha Puja was held from 6.13 am to 6.32 am. Yaduveer Krishnadatta Chamaraja Wadiyar performed puja and other rituals. The idol of the palace deity Chamundeshwari was brought from the ‘Kannadi Thotti’ to the ‘Chamundi Thotti’.
Sri Yaduveer Wadiyar performed the puja to the ‘Banni tree’ at the Bhuvneshwari Mantap. The rituals concluded with a procession of the Kind Yaduveer Wadiyar to the palace.
Keywords: Mysuru Dasara/ World famous Jambu Savari/ rituals/ traditions/ conclude