ದಸರಾಗೂ ಮುನ್ನ ಉಗ್ರ ಸಂಘಟನೆಗಳಿಂದ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ವಿಚಾರ: ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು-ಸಚಿವ ಸೋಮಣ್ಣ ಹೇಳಿಕೆ

ಮೈಸೂರು,ಸೆ,17,2019(www.justkannada.in): ಮೈಸೂರು ದಸರೆಗೂ ಮುನ್ನವೇ ವಿದ್ವಂಸಕ ಕೃತ್ಯ ನಡೆಸಲು ಉಗ್ರ ಸಂಘಟನೆಗಳ ಪ್ಲ್ಯಾನ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿನ ಪತ್ರಕರ್ತರ ಸಂಘದಲ್ಲಿ  ಸಂವಾದ ಕಾರ್ಯಕ್ರಮ ನಡೆಸಿ ಸಚಿವ ವಿ.ಸೋಮಣ್ಣ ಮಾತನಾಡಿದರು. ದಸರಾ ಮಹೋತ್ಸವದ ಸಂಭ್ರಮ ಮುಖ್ಯ. ಅದರ ಜೊತೆಯಲ್ಲೇ ಬರುವ ಪ್ರವಾಸಿಗರ ಸುರಕ್ಷತೆ ಕೂಡ ಮುಖ್ಯ. ಭದ್ರತೆಗೆ ಆದ್ಯತೆ ಮೇರೆಗೆ ಗಮನ ಹರಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಐಜಿ ಅವರೊಂದಿಗೂ ಚರ್ಚಿಸಿದ್ದೇನೆ.‌ ಖುದ್ದಾಗಿ ಗೃಹ ಸಚಿವರನ್ನು ಭೇಟಿ ಮನವಿ ಮಾಡಿದ್ದೇನೆ.‌ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಪಾರಂಪರಿಕ ಹಬ್ಬಕ್ಕೆ‌ ನಿಮ್ಮ‌ ಸಲಹೆ ನನಗೆ ‌ಮುಖ್ಯ. ನಿಮ್ಮ ಸಲಹೆ ಸೂಚನೆ‌ ನನ್ನ‌ ಹುಮ್ಮಸ್ಸು ಹೆಚ್ಚಿಸಿದೆ. ಇನ್ನೂ ಕೆಲವು ಕೆಲಸ ಕಾರ್ಯ ಆರಂಭ ವಿಳಂಬವಾಗಿದೆ. ನಿಮ್ಮ ಸಲಹೆ ಸೂಚನೆಗಳಿಂದ ಇನ್ನೂ ಕೆಲವು ಸಫಲತೆ ಕಂಡಿಲ್ಲ. ಸರ್ಕಾರ ಖರ್ಚು ಮಾಡುವುದು ಕಡಿಮೆ. ಜನರ ಸಫಲತೆ ಕಾಣಲು ನಿಮ್ಮ ಸಹಕಾರ‌ ಮುಖ್ಯ. ನೀವು ಜನರಿಗೆ ತಿಳಿಸಿದ್ದು ಸಫಲತೆ ಕಂಡಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.

ಕಳೆದ ಬಾರಿಗಿಂತ ಈ ಬಾರಿ ಯುವ ಸಂಭ್ರಮ ವಿಭಿನ್ನವಾಗಲಿದೆ. ದಸರಾ ಪಕ್ಷಾತೀತವಾಗಿ ನಡೆದು ಬಂದಿದೆ. ಅದನ್ನ ನಮ್ಮ‌ ಸರ್ಕಾರದ ಸಹಕಾರದಲ್ಲಿ ಈ ಬಾರಿಯೂ ಅದೇ ರೀತಿ ನಡೆಸುತ್ತೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ದಸರಾ ಮುಗಿದ ಬಳಿಕ ಶಾಸ್ವತ ದಸರಾ ಪ್ರಾಧಿಕಾರ ರಚನೆ ಕುರಿತು ನಿರ್ಧಾರ

ಶಾಸ್ವತ ದಸರಾ ಪ್ರಾಧಿಕಾರ ರಚನೆ ಮಾಡುವ  ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಈ ದಸರಾ ಮುಗಿದ ಬಳಿಕ  ಶಾಸ್ವತ ದಸರಾ ಪ್ರಾಧಿಕಾರ ರಚನೆ ಬಗ್ಗೆ ಒಂದು ನಿರ್ಧಾರವನ್ನು ಮಾಡುತ್ತೇವೆ. ಒಂದು ಪ್ರಾಧಿಕಾರ ರಚನೆ ಮಾಡೋದು ದೊಡ್ಡ ವಿಚಾರವಲ್ಲ. ಅದು ಯಾವ ರೀತಿಯ ಪ್ರಾಧಿಕಾರ ರಚನೆ ಆಗಬೇಕು. ಆ ಬಗ್ಗೆ ಮುಂದಿನ ದಿನ ನಿರ್ಧಾರ ಮಾಡ್ತಿವಿ. ರಾಜಕಾರಣಿಗಳು ಆ ಪ್ರಾಧಿಕಾರದಲ್ಲಿ ಇರಬೇಕಾ..ಬೇಡ್ವಾ.? ಅಧಿಕಾರಿಗಳಿಂದ ಪ್ರಾಧಿಕಾರ ಇರಬೇಕಾ.? ಎಂಬ ಯೋಚನೆ ಮಾಡ್ತಿವಿ. ಇದನ್ನ ಮುಂದಿನ ದಿನದಲ್ಲಿ ನಿಮ್ಮೊಟ್ಟಿಗೆ ಚರ್ಚೆ ಮಾಡ್ತಿನಿ ಎಂದು ಹೇಳಿದರು.

ಗೋಲ್ಡ್‌ ಕಾರ್ಡ್ ಅನ್ನ 2500 ಸಾವಿರ ಒಳಗೆ ನಿಲ್ಲಿಸಲು ಚಿಂತನೆ..

ದಸರಾ ‌ಗೋಲ್ಡ್ ಕಾರ್ಡ್ ‌ವಿಚಾರ ಸಂಬಂಧ ಮಾತನಾಡಿದ ವಿ.ಸೋಮಣ್ಣ,  ಗೋಲ್ಡ್‌ ಕಾರ್ಡ್ ಅನ್ನ 2500 ಸಾವಿರ ಒಳಗೆ ನಿಲ್ಲಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಡಿಸಿ ಇತರೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ನಮಗೆ ಈ ಗೋಲ್ಡ್ ಕಾರ್ಡ್ ನಿಂದ‌ ಹಣ ಬರುತ್ತಿಲ್ಲ. ಈ ಬಾರಿ ಗೋಲ್ಡ್ ಕಾರ್ಡ್ ವಿಚಾರ ದಲ್ಲಿ ಒಂದು ಹೊಸ ಬೆಳವಣಿಗೆ ಮಾಡಲಾಗಿದೆ ಎಂದು ತಿಳಿಸಿದರು.

Key words: Mysore- Dasara- Plans –terrorist-  Minister-V. Somanna -reaction