ಮೈಸೂರು ದಸರಾ: ಬಿಗಿ ಬಂದೋಬಸ್ತ್, ಸಿಸಿ ಟಿವಿ ಕಣ್ಗಾವಲು- ಭದ್ರತೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ.

ಮೈಸೂರು,ಸೆಪ್ಟಂಬರ್,24,2022(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ  ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ದಸರಾಗಾಗಿ ಒಟ್ಟು 5485 ಮಂದಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಮೈಸೂರು ದಸರಾ ಭದ್ರತೆ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಸೆಪ್ಟಂಬರ 26ರಿಂದ ಅಕ್ಟೋಬರ್ 5ರವರೆಗೆ ಮೈಸೂರು ನಗರದಿಂದ 1255 ಮಂದಿ, ಹೊರ ಜಿಲ್ಲೆಗಳಿಂದ 3580 ಮಂದಿ ಪೊಲೀಸ್ ನಿಯೋಜನೆ ಮಾಡಲಾಗಿದೆ. 650 ಗೃಹ ರಕ್ಷಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಈ ನಡುವೆ 16 ತಂಡಗಳು ಕಾರ್ಯಕ್ರಮದ ಸ್ಥಳ, ರೂಟ್ ನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಮೊಬೈಲ್ ಕಂಮಾಂಡ್ಸ್ ಸೆಂಟರ್ ವಾಹನ ಬಳಕೆ ಮಾಡಲಾಗುತ್ತಿದ್ದು, ಪೊಲೀಸರಿಗೆ ಅರಮನೆ, ಬನ್ನಿಮಂಟಪದ ಬಳಿ ಕಾರ್ಯ ನಿರ್ವಹಿಸುವವರಿಗೆ  ಬಾಡಿ ವೋರ್ನ್ ಕ್ಯಾಮೆರಾ ನೀಡಲಾಗುತ್ತಿದೆ. ಸಂಪೂರ್ಣ ದೃಶ್ಯಾವಳಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಲಿದ್ದು, ದಸರಾ ಕಾರ್ಯಕ್ರಮಗಳಲ್ಲಿ ಡ್ರೋಣ್ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ 13,140 ಕ್ಯಾಮೆರಾ ಅಳವಡಿಕೆ…

ಮೈಸೂರು ನಗರದಲ್ಲಿ 13,140 ಕ್ಯಾಮೆರಾ ಅಳವಡಿಸಲಾಗಿದ್ದು, ಮೆರವಣಿಗೆ ಮಾರ್ಗ, ಇತರೆ ಸ್ಥಳಗಳಲ್ಲಿ 110 ಸಿಸಿ ಕ್ಯಾಮೆರಾ ಕೆಲಸ ಮಾಡುತ್ತವೆ . 24 ಗಂಟೆಗಳಲ್ಲೂ ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಆಗಲಿದೆ. ಪೊಲೀಸ್ ಇಲಾಖೆಯಿಂದ ಮಂಡಿಠಾಣೆ  ,ದೇವರಾಜ ಠಾಣೆ, ಲಷ್ಕರ್, ನಜರ್ಬಾದ್ ಠಾಣೆಗಳಿಂದ 8 ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹೈ ಅಲರ್ಟ್ ಆಗಿದ್ದು, 24 ಗಂಟೆಗಳೂ ಕೂಡ ನಗರದಲ್ಲಿ‌ ಪೊಲೀಸರು ಗಸ್ತು ತಿರುಗಲಿದ್ದಾರೆ. ಇನ್ನು ವೃತ್ತಿ‌ನಿರತ ಹಳೆಯ ಕಳ್ಳರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ವಿವಿಧ ಕಾರ್ಯಕ್ರಮ‌ ಸ್ಥಳಗಳಲ್ಲಿ 12 ಅಗ್ನಿಶಾಮಕ ಹಾಗೂ ಎಂಟು ಆಂಬ್ಯುಲೆನ್ಸ್ ನಿಯೋಜನೆ, ಬಾಂಬ್ ಪತ್ತೆದಳ, ಶ್ವಾನದಳದಿಂದ ನಿತ್ಯ ಪರಿಶೀಲನೆ ನಡೆಸಲಾಗುತ್ತದೆ ಎಂದು ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.

ಸೆ.26 ರಂದು ರಾಷ್ಟ್ರಪತಿಗಳಿಂದ ದಸರಾ ಉದ್ಘಾಟನೆ ಆಗಲಿದೆ. ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿದ್ದೇವೆ. ಭದ್ರತೆ ದೃಷ್ಟಿಯಿಂದಲೂ ಕೂಡ ಸೂಕ್ತ ಬಂದೋಬಸ್ತ್ ಕ್ರಮವಹಿಸಿದ್ದೇವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ ಎಂದು  ಪೋಲಿಸ್ ಆಯುಕ್ತ ಚಂದ್ರಗುಪ್ತ ಹೇಳಿದರು.

 ಟ್ರಾಫಿಕ್ ನಿರ್ವಹಣೆಗೆ ಕ್ರಮ.

ಮೈಸೂರು ನಗರದಲ್ಲಿ ದಸರಾ ಸಮಯದಲ್ಲಿ ವಾಹನ ಸಂಚಾರದ ದಟ್ಟಣೆ ನಿಯಂತ್ರಣ ಮಾಡಲು ನಾವು ನಾಲ್ಕು ದಿಕ್ಕುಗಳಲ್ಲೂ ಬೇರೆ ಬೇರೆ ಮಾರ್ಗಗಳನ್ನು ಮಾಡಿದ್ದೇವೆ. ಸಾರ್ವಜನಿಕರು ಅರಮನೆ ಸುತ್ತಮುತ್ತ ಬರುವಾಗ ಆದಷ್ಟು ದೂರದಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಬಂದು ಕಾಲ್ನಡಿಯಲ್ಲಿ ಬಂದು ಎಲ್ಲವನ್ನೂ ವೀಕ್ಷಣೆ ಮಾಡಿ ಇದರಿಂದ ಟ್ರಾಫಿಕ್ ನಿಯಂತ್ರಣ ಆಗುತ್ತದೆ ಎಂದು ಸಾರ್ವಜನಿಕರಿಗೆ ಪೋಲಿಸ್ ಆಯುಕ್ತ ಚಂದ್ರಗುಪ್ತ ಮನವಿ ಮಾಡಿದ್ದಾರೆ.

ಅರಮನೆಯಿಂದ ವಸ್ತು ಪ್ರದರ್ಶನಕ್ಕೆ ಹೋಗಲು ಅಂಡರ್ ಪಾಸ್ ನಲ್ಲೇ ಹೋಗಬೇಕು. ರಸ್ತೆ ಮೇಲೆ ಹೋಗಬಾರದು. ನಾವು ಅಂಡರ್ ಪಾಸ್ ನಲ್ಲಿ ಹೋಗಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಎಲ್ಲಿ ಟಿಕೇಟ್ ಲಭ್ಯ ಇರುತ್ತದೋ ಅಲ್ಲಿ ಟಿಕೇಟ್ ಪಡೆದು ಪ್ರವೇಶ ಮಾಡಬೇಕು. ಅನವಶ್ಯಕವಾಗಿ ಬೇರೆ ಬೇರೆ ಗೇಟ್ ಗಳ ಮೂಲಕ ಪ್ರವೇಶ ಮಾಡುವ ಪ್ರಯತ್ನ ಮಾಡಬಾರದು. ಸಹಾಯಕ್ಕಾಗಿ ಪೋಲಿಸ್ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಈ ಪೋಲಿಸ್ ಕೇಂದ್ರಗಳು ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕರ್ತವ್ಯ ನಿರ್ವಹಿಸುತ್ತದೆ. ಪ್ರವಾಸಿಗರಿಗೆ ಏಕಮುಖ ಸಂಚಾರ,ವಾಹನ ನಿಲುಗಡೆ ವ್ಯವಸ್ಥೆ  ಇತರೆ ಮಾಹಿತಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು.

Key words: Mysore dasara-Police Commissioner- Dr. Chandragupta-security-information

ENGLISH SUMMARY..

Mysuru Dasara: Tight security, CCTV surveillance: Police Commissioner Dr. Chandragupta provides security information
Mysuru, September 24, 2022 (www.justkannada.in): Mysuru City Police Commissioner Dr. Chandragupta today brief the security arrangements made for the forthcoming historic Mysuru Dasara Mahotsav. A total number of 5485 police personnel have been deputed for the purpose.
Addressing a press meet in Mysuru today, he informed that 1255 police personnel from Mysuru city, 3580 from other districts have been deputed for security duty in Mysuru city from September 26 to October 5. A total number of 650 home guards have also been pressed into service. Contemplations on program venues, movement of vehicular traffic, etc. is being sketched by 16 teams. Mobile Commands Center vehicle is being used, and body worn cameras have been provided to the police personnel who will be on duty near the palace and Banni Mantap. A total number of 13,140 cameras are installed across the city to keep a strict vigil. The entire event will be recorded in the cameras. Also drone camera surveillance arrangement is also made for the historic event,’ he informed.
Keywords: Mysuru Dasara/ Police Commissioner/ security arrangements