ಮೈಸೂರು,ಅಕ್ಟೋಬರ್,5,2021(www.justkannada.in): ಅಕ್ಟೋಬರ್ 15 ರಂದು ನಡೆಯಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ತಾಲೀಮು ನಡೆಸಲಾಗುತ್ತಿದ್ದು ಇಂದು ಎರಡನೇ ಹಂತದ ಕುಶಾಲತೋಪು ತಾಲೀಮು ನಡೆಸಲಾಯಿತು.
ಮೈಸೂರು ಅರಮನೆ ವರಹ ದ್ವಾರದ ಬಳಿ ಗಜಪಡೆ ಹಾಗೂ ಅಶ್ವಪಡೆ ಬೆದರದಂತೆ ಕುಶಾಲತೋಪು ತಾಲೀಮು ನಡೆಸಲಾಯಿತು. ಎರಡನೆ ಹಂತದ ತಾಲೀಮಿನಲ್ಲಿ 7 ಆನೆಗಳು ಭಾಗಿಯಾಗಿದ್ದವು. ವಿಕ್ರಮ ಆನೆ ಹೊರುತುಪಡಿಸಿ ಉಳಿದೆಲ್ಲಾ ಆನೆಗಳಿಗೆ ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಡಿಸಿಎಫ್ ಕರಿಕಾಳನ್, ಡಿಸಿಪಿ ಗೀತಾಪ್ರಸನ್ನ, ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ನೇತೃತ್ವದಲ್ಲಿ ತಾಲೀಮು ನಡೆಯಿತು.
ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ 21ಸುತ್ತು ಸಿಡಿಮದ್ದು ಸಿಡಿಸಿದರು. ತಾಲೀಮಿನಲ್ಲಿ ಧನಂಜಯ, ಗೋಪಾಸ್ವಾಮಿ, ಅಶ್ವತಾಮ ಆನೆಗಳು ಬೆದರಿದವು. ಕಳೆದ ಬಾರಿ ಆನೆಗಳ ಕಾಲಿಗೆ ಚೈನನ್ನು ಕಟ್ಟಲಾಗಿತ್ತು. ಆದರೆ ಈ ಬಾರಿ ಚೈನನ್ನು ಕಟ್ಟಿರಲಿಲ್ಲ. ಕಳೆದ ಬಾರಿಗಿಂತ ಈ ಬಾರಿ ಆನೆಗಳು ಧೈರ್ಯವಾಗಿವೆ. ಮುಂದಿನ ತಾಲೀಮಿನವರೆಗೆ ಸಂಪೂರ್ಣ ಧೈರ್ಯ ಬರಲಿದೆ. ವಿಕ್ರಮ್ ಆನೆ ಮಸ್ತ್ ನಲ್ಲಿದೆ. ಹಾಗಾಗಿ ಈ ಬಾರಿ ತಾಲೀಮಿನಲ್ಲಿ ಭಾಗಿಯಾಲ್ಲ. ವಿಕ್ರಮ್ ಆನೆಗೆ ಮದ ಇಳಿಯದಿದ್ದರೆ ಪಟ್ಟದ ಆನೆಗೆ ಪರ್ಯಾಯ ಆಯ್ಕೆ ಮಾಡಲಾಗುತ್ತೆ. ಧನಂಜಯ, ಗೋಪಾಲಸ್ವಾಮಿ ಆನೆಗಳು ಪರ್ಯಾಯವಾಗಿವೆ. ನೋಡಿಕೊಂಡು ಪಟ್ಟದ ಆನೆಯನ್ನು ನಿರ್ಧಾರ ಮಾಡಲಾಗುತ್ತೆ. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದು ಡಿಸಿಎಫ್ ಕರಿಕಾಳನ್ ಹೇಳಿದರು.
Key words: mysore dasara- second level – workout -Three elephants- threatened