ಮೈಸೂರು, ಅಕ್ಟೋಬರ್,2,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಚಾಲನೆ ಸಿಗಲಿದ್ದು, ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ ಕಾರ್ಯಗಳು ನಡೆದಿದೆ. ದಸರಾ ಹಿನ್ನೆಲೆ, ಚಾಮುಂಡಿ ಬೆಟ್ಟದಲ್ಲಿ ದಿನನಿತ್ಯ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ಚಾಮುಂಡೇಶ್ವರಿ ತಾಯಿಗೆ ಇಷ್ಟವಾದ ತಿನಿಸನ್ನು ಪ್ರಸಾದ ರೂಪದಲ್ಲಿ ವಿನಿಯೋಗ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ ಅವರು, ದಸರಾ ಪ್ರಯುಕ್ತ ಪ್ರತಿ ದಿನವೂ ಒಂದೊಂದು ತಿನಿಸು ತಯಾರಿಸಿ ಪ್ರಸಾದ ರೂಪದಲ್ಲಿ ವಿನಿಯೋಗ ಮಾಡಲಾಗುತ್ತದೆ. ಭಾನುವಾರ ಬಿಸಿಬೇಳೆ ಬಾತ್, ಸೋಮವಾರ ಖಾರ ಪೊಂಗಲ್, ಮಂಗಳವಾರ ಪುಳಿಯೋಗರೆ, ಬುಧವಾರ ಉದ್ದಿನ ಅನ್ನ, ಗುರುವಾರ ಬೆಲ್ಲದ ಅನ್ನ, ಬುಗರಿ ಕಾಳು, ಶುಕ್ರವಾರ ಕಾಳುಸಾಸಿವೆ ಅನ್ನ, ಬುಗರಿ ಕಾಳು, ಶನಿವಾರ ಎಳ್ಳುಹುಳಿ ಅನ್ನ ವಿನಿಯೋಗ ಮಾಡಲಾಗುತ್ತದೆ ಎಂದಿದ್ದಾರೆ.
ಮೊದಲಿಗೆ ತಾಯಿ ಚಾಮುಂಡೇಶ್ವರಿಗೆ ನೈವೇದ್ಯ ಮಾಡಿ ಬಳಿಕ ನೈವೇದ್ಯವನ್ನು ಪ್ರಸಾದದಲ್ಲಿ ಮಿಶ್ರಣ ಮಾಡಲಾಗುತ್ತದೆ. ನಂತರ ಪ್ರಸಾದವನ್ನು ಭಕ್ತರಿಗೆ ವಿನಿಯೋಗ ಮಾಡಲಾಗುತ್ತದೆ ಮಲೆಮಹದೇಶ್ವರ ರೀತಿಯ ದಿಟ್ಟಂ ಲಡ್ಡು ತಯಾರಿಸಲಾಗುತ್ತದೆ. ನಂದಿನಿ ತುಪ್ಪದಿಂದಲೇ ಲಡ್ಡು ತಯಾರಿ ಮಾಡಲಾಗುತ್ತದೆ ಎಂದು ರೂಪ ಅವರು ತಿಳಿಸಿದ್ದಾರೆ.
Key words: Mysore dasara, special prasada, devotees, Chamundi Hill