ಮೈಸೂರು,ಆ,19,2019(www.justkannada.in): ಈ ಬಾರಿ ದಸರಾದಲ್ಲಿ ಸ್ಟ್ರೀಟ್ ಫೆಸ್ಟಿವಲ್ ಆಯೋಜನೆ ಮಾಡಬೇಕೋ ಅಥವಾ ಇಲ್ಲವೋ ಎಂಬುದನ್ನ ದಸರಾ ಉಪಸಮಿತಿ ನಿರ್ಧರಿಸಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಮೈಸೂರು ಡಿಸಿ ಅಭಿರಾಂ ಜೀ ಶಂಕರ್, ಈ ಬಾರಿಯ ದಸರಾದಲ್ಲಿ ಸ್ಟ್ರೀಟ್ ಫೆಸ್ಟಿವಲ್ ಆಯೋಜನೆ ಮಾಡುವ ಬಗ್ಗೆ ದಸರಾ ಉಪಸಮಿತಿ ನಿರ್ಧಾರ ತೆಗೆದುಕೊಳ್ಳಿಲಿದೆ. ಸ್ಟ್ರೀಟ್ ಫೆಸ್ಟಿವಲ್ ಮಾದರಿಯ ಕುರಿತು ಸಭೆ ನಡೆಸಿ ರೂಪುರೇಷೆ ತರಲಾಗುವುದು. ಸ್ಥಳ ಹಾಗೂ ವಿನ್ಯಾಸದ ಹೊಸ ಸಾಧ್ಯತೆಗಳ ಬಗ್ಗೆ ಸಭೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು. ಆದರೆ ಕಳೆದವರ್ಷ ಉಂಟಾದ ಗೊಂದಲಮಯ ಘಟನೆಗಳು ಈ ಬಾರಿ ಮರುಕಳಿಸದಂತೆ ಜಾಗೃತ ವಹಿಸಲಾಗುವುದು ಎಂದು ತಿಳಿಸಿದರು.
2017ರಲ್ಲಿ ದೇವರಾಜ ಅರಸು ರಸ್ತೆಯಲ್ಲಿ ಹಾಗೂ 2018ರಲ್ಲಿರಲ್ಲಿ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಆಯೋಜನೆ ಮಾಡಲಾಗಿತ್ತು, ಈ ಬಾರಿ ಸರ್ಕಾರ ಸರಳ ದಸರಾ ಆಚರಣೆ ಮಾಡಲು ಸೂಚನೆ ನೀಡಿದೆ, ಈ ಬಾರಿ ಸ್ಟ್ರೀಟ್ ಫೆಸ್ಟಿವಲ್ ನನ್ನು ಆಯೋಜನೆ ಮಾಡಬೇಕೋ ಅಥವಾ ಇಲ್ಲವೋ ಎಂಬುದನ್ನ ದಸರಾ ಉಪಸಮಿತಿ ನಿರ್ಧರಿಸಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದರು.
Key words: mysore-dasara-street festival-DC-abhiram ji shankar