ಮೈಸೂರು,ಅಕ್ಟೋಬರ್,5,2022(www.justkannada.in): ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಲಕ್ಷಂತರ ಜನರು ಕಾದು ಕುಳಿತಿದ್ದಾರೆ. ಈ ಬಾರಿ ಸ್ತಬ್ದಚಿತ್ರದ ಮೂಲಕ ನಟ ದಿ. ಪುನೀತ್ ರಾಜ್ ಕುಮಾರ್ ಅವರನ್ನ ಸ್ಮರಣೆ ಮಾಡಿಕೊಳ್ಳಲಾಗುತ್ತಿದೆ.
ಜಂಬೂ ಸವಾರಿಯಲ್ಲಿ ರಾಜ್ಯದ 31 ಜಿಲ್ಲೆಗಳ ಕಲೆ-ಸಂಸ್ಕೃತಿಯ-ಪರಂಪರೆಯನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ (ಟ್ಯಾಬ್ಲೋ) ಪ್ರದರ್ಶನ ತನ್ನದೇ ಆದ ಮಹತ್ವ ಪಡೆದಿದೆ ಮತ್ತು ಆಕರ್ಷಣೆ ಹೊಂದಿದೆ. ಈ ಬಾರಿಯ ದಸರಾ ಉತ್ಸವದಲ್ಲಿ 47 ಸ್ತಬ್ಧ ಚಿತ್ರಗಳ ಪ್ರದರ್ಶನವಾಗಲಿದೆ.
ಈ ನಡುವೆ ಚಾಮರಾಜನಗರದಿಂದ ಅಪ್ಪು ಸ್ತಬ್ಧ ಚಿತ್ರವನ್ನು ರೂಪಿಸಲಾಗಿದೆ. ಚೆಲುವ ಚಾಮರಾಜನಗರ ರಾಯಭಾರಿ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಸ್ತಬ್ಧಚಿತ್ರದ ಮೂಲಕ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಪುನೀತ್ ರಾಜ್ ಕುಮಾರ ಮೂಲತಃ ಚಾಮರಾಜನಗರ ಜಿಲ್ಲೆಯವರು. ಅವರನ್ನೇ ಕೇಂದ್ರವಾಗಿಟ್ಟುಕೊಂಡು ಆ ಜಿಲ್ಲೆಯ ಟ್ಯಾಬ್ಲೋ ತಯಾರಾಗಿದೆ.
Key words: mysore dasara-tablo-actor-punith rajkumar