ಮೈಸೂರು ದಸರಾ: ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ನಿಗದಿ: ಈ ಬಾರಿಯೂ ಜಟ್ಟಿ‌ ಕಾಳಗಕ್ಕೆ ಬ್ರೇಕ್.

ಮೈಸೂರು,ಸೆಪ್ಟಂಬರ್,25,2021(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಪಾರಂಪರಿಕ ದಸರಾ ಸಡಗರ ಸಂಭ್ರಮ ಮನೆ ಮಾಡಿದೆ. ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನ ನಿಗದಿ ಮಾಡಲಾಗಿದ್ದು, ಅರಮನೆ ಕಾರ್ಯಕ್ರಮಗಳ ಪಟ್ಟಿ ಲಭ್ಯವಾಗಿದೆ.

ಕೊರೋನಾ ಹಿನ್ನೆಲೆ ಈ ಬಾರಿಯೂ ಪಾರಂಪರಿಕ ಜಟ್ಟಿ‌ ಕಾಳಗ ರದ್ಧುಗೊಳಿಸಲಾಗಿದೆ. ಕಳೆದ ಬಾರಿಯೂ ಜಟ್ಟಿ ಕಾಳಗವನ್ನ ರದ್ಧುಗೊಳಿಸಲಾಗಿತ್ತು. ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.mysore palace- traditional -dasara -Dynasty –kasagi  Durbar - Yadaveer.

ಅ 7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ಅರಮನೆಗೆ ಮಧ್ಯಾಹ್ನ 2.30ರವರೆಗೆ  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅಕ್ಟೋಬರ್ 7ರಿಂದ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅ 14 ಅರಮನೆಯಲ್ಲಿ ಆಯುಧಪೂಜೆ  ನಡೆಯಲಿದ್ದು, ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. ಬೆಳಿಗ್ಗೆ 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಿ, ನಂತರ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ತರಲಾಗುತ್ತದೆ.

ಬೆಳಿಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪೂಜೆ ಸಲ್ಲಿಸಲಿದ್ದಾರೆ. ಆಗಸ್ಟ್ 15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 5.45ಕ್ಕೆ ಅರಮನೆ ಆನೆ ಕುದುರೆ ಹಸುಗಳು ಆಗಮಿಸಲಿದ್ದು, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೆರವೇರಲಿದೆ.

7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದ್ದು, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ದೇಗುಲದ ಬನ್ನಿ ಮರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ರವಾನೆ ಮಾಡಲಾಗುತ್ತದೆ ಅಂದು ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.

Key words: Mysore Dasara-traditional –program-jatti kalaga

ENGLISH SUMMARY…

Mysuru Dasara: List of cultural programs in the Palace prepared – No ‘Jetti Kaalaga’ this year too
Mysuru, September 25, 2021 (www.justkannada.in): The countdown for the world-famous Mysuru Dasara festivities has commenced. The list of cultural programs in the palace has been prepared.
The famous ‘Jetti Kaalaga’ (wrestling) is canceled this year also. The assembling of the golden throne inside the palace will be done on October 1. Entry for visitors will be restricted on that day.
The Palace Dasara programs will be held from October 7 to 14, and entry of visitors has been restricted from October 7 to October 15, till 2.30 pm. The Private Durbar (Khaasagi Durbar) will begin on October 7, which will be held by the present prince Yaduveer Krishnadutta Chamaraja Wadiyar.
The ‘Ayudha Puja’ program will be held on October 14 and the puja rituals will commence from 5.30 am. The palace weapons will be taken to the Kodi Someshwara temple inside the Palace premises at 7.45 am, where puja will be held. After that, the weapons will be shifted to the Palace Wedding hall. The puja will be performed between 11.02 am and 11.22 am.mysore palace- traditional -dasara -Dynasty –kasagi  Durbar - Yadaveer.
The Vijayadashami programs will be held on October 15. The world-renowned Dasara procession will be held from 7.20 am to 7.40 am starting from the Palace main entrance to the Bhuvaneshwari temple inside the palace premises. Prince Yaduveer Krishnadutta Chamaraja Wadiyar will offer puja to the ‘Banni tree’ as per the tradition. The golden throne will be dismantled on October 31 and shifted to the treasury. Entry to the visitors will be restricted on that day also up to 1.30 pm.
Keywords: Mysuru Dasara/ list of cultural program ready/ Dasara Mahotsav/ October 7 to 14