ಮೈಸೂರು,ಆ,28,2019(www.justkannada.in) ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಮನಸ್ಸುಗಳನ್ನ ಕುಣಿಸಿ ತಣಿಸುವ ‘ಯುವ ಸಂಭ್ರಮ’ ಸೆಪ್ಟಂಬರ್ 15ರಿಂದ ಆರಂಭವಾಗಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. ಸೆಪ್ಟಂಬರ್ 28 ರಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದಸರಾ ಅಂಗವಾಗಿ ಸೆಪ್ಟೆಂಬರ್ 15ರಿಂದ ಬಹು ಸಂಭ್ರಮದ ಯುವ ಸಂಭ್ರಮ ಆರಂಭವಾಗಲಿದ್ದು ಯುವಸಂಭ್ರಮ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ದತೆ ನಡೆಸಿದೆ. ವಿಶೇಷ ವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಯುವ ಸಂಭ್ರಮ ನಡೆಯಲಿದ್ದು, ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಬಾರಿ ನೃತ್ಯ ಕಾರ್ಯಕ್ರಮದೊಂದಿಗೆ ಸ್ಕಿಟ್, ಏಕ ಪಾತ್ರಾಭಿನಯ ಹಾಗೂ ಬ್ಯಾಂಡ್ ಮ್ಯೂಸಿಕ್ಗೆ ಅವಕಾಶ ನೀಡಲಾಗಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಉದ್ದೇಶದಿಂದ ನೃತ್ಯದ ಜೊತೆಗೆ ಇತರೆ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ವಿವಿಧ ಕಾರ್ಯಕ್ರಮಗಳು ಯುವಜನತೆಯ ಮನತಣಿಸಲಿವೆ.
Key words: Mysore Dasara –yuva sanbrama-September 15