ಬೆಂಗಳೂರು, ಸೆ.26,2024: (www.justkannada.in news): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ. ಅರಮನೆಯಲ್ಲಿನ ಖಾಸಗಿ ಕಾರ್ಯಕ್ರಮಕ್ಕೆ ಸಿದ್ಧತೆ. ರಾಜವಂಶಸ್ಥರಿಂದ ಅರಮನೆಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮ.
ಸೆಪ್ಟೆಂಬರ್ 27ರಿಂದ ಅಕ್ಟೊಬರ್ 27ರವರೆಗೆ ನಡೆಯಲಿರುವ ಖಾಸಗಿ ಕಾರ್ಯಕ್ರಮ.
ಸೆ. 27ರಂದು ಬೆಳಿಗ್ಗೆ 7.30ಕ್ಕೆ ನವಗ್ರಹ ಹೋಮ ಮತ್ತು ಶಾಂತಿ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ.
ಬಳಿಕ 9.55ರಿಂದ 10.25ರ ಒಳಗೆ ಅರಮನೆ ದರ್ಬಾರ್ ಹಾಲ್ ನಲ್ಲಿ ರತ್ನಖಚಿತ ಆಸನ ಜೋಡಣೆ.
ಬಳಿಕ ಪಟ್ಟದ ಹಸು, ಕುದುರೆ, ಆನೆ, ಅಶ್ವಗಳು ಗೋ ಶಾಲೆಗೆ ಆಗಮನ.
ಅ. 3ರಂದು ನವರಾತ್ರಿ ಶುಭಾರಂಭ. ಮೊದಲಿಗೆ ಎಣ್ಣೆ ಶಾಸ್ತ್ರ. ಬೆಳಿಗ್ಗೆ 5.45ರಿಂದ 6.10ರ ಒಳಗೆ ರತ್ನಖಚಿತ ಆಸನಕ್ಕೆ ಸಿಂಹ ಮುಖ ಜೋಡಣೆ. ಬೆಳಿಗ್ಗೆ 7.45ರಿಂದ 8.45ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಮಹರಾಜರಿಗೆ ಕಂಕಣಧಾರಣೆ.
ಬೆಳಿಗ್ಗೆ 10.30ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳ ಆಗಮನ.. ಬೆಳಿಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ. 11.35ರಿಂದ 12.05ರ ಒಳಗೆ ಸಿಂಹಾಸನರೋಹಣ ಖಾಸಗಿ ದರ್ಬಾರ್.
ಮದ್ಯಾಹ್ನ 1.05ರಿಂದ 1.30ರ ಒಳಗೆ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುವುದು.
ಅ. 9 ಬುಧವಾರ ಬೆಳಿಗ್ಗೆ 10.05ರಿಂದ 10.35ರ ಒಳಗೆ ಸರಸ್ವತಿ ಪೂಜೆ ಆರಂಭ.
ಅ. 10 ಗುರುವಾರ ರಾತ್ರಿ ಖಾಸಗಿ ದರ್ಬಾರ್ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ.
ಅ. 11ರಂದು ಶುಕ್ರವಾರ ದುರ್ಗಾಷ್ಟಮಿ.
ಅ. 11ರಂದು ಶುಕ್ರವಾರ ಮಹಾನವಮಿ. ಬೆಳಿಗ್ಗೆ 6ಗಂಟೆಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿ ಹೋಮ. ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನ. 6.40ರಿಂದ 7.10ರ ಒಳಗೆ ಖಾಸಗಿ ಆಯುಧಗಳನ್ನ ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕೊಂಡೋಯ್ಯುವುದು.
ಬೆಳಿಗ್ಗೆ 7.30 ರಿಂದ 8ಗಂಟೆ ಒಳಗೆ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನ ಆನೆ ಬಾಗಿಲ ಮುಖಾಂತರ ಕಲ್ಯಾಣ ಮಂಟಪಕ್ಕೆ ತರುವುದು. ಬೆಳಿಗ್ಗೆ 9.05ಕ್ಕೆ ಚಂಡಿ ಹೋಮ ಪೂರ್ಣಹುತಿ. 11.45ಕ್ಕೆ ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನ., 12.20ರಿಂದ 12.45ರ ಒಳಗೆ ಅರಮನೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ.
ಸಂಜೆ ಖಾಸಗಿ ದರ್ಬಾರ್ ನ ನಂತರ ಸಿಂಹ ಮುಖ ವಿಸರ್ಜನೆ ಹಾಗೂ ಮಹರಾಜರ ಖಾಸಗಿ ಮನೆ ದೇವರ ದರ್ಶನ. ಬಳಿಕ ಅರಮನೆಯಲ್ಲಿ ದಫ್ತಾರ್ ಪೂಜೆ. ನಂತರ ಮಹರಾಜ ಮತ್ತು ಮಹಾರಾಣಿಯವರಿಂದ ಅಮಲ ದೇವತಾ ಸನ್ನಿಧಿ ದರ್ಶನ.
ಅ. 12ಶನಿವಾರ ವಿಜಯದಶಮಿ. ಬೆಳಿಗ್ಗೆ 9.45ಕ್ಕೆ ಪಟ್ಟದ ಆನೆ, ಹಸು, ಕುದುರೆ ಆನೆ ಬಾಗಿಲಿಗೆ ಆಗಮನ. 10.15ಕ್ಕೆ ಉತ್ತರಾ ಪೂಜೆ ಆರಂಭ. 11.20ರಿಂದ 11.45ರ ಒಳಗೆ ವಿಜಯಯಾತ್ರೆ ಹಾಗೂ ಶಮಿ ಪೂಜೆ. ವಿಜಯಯಾತ್ರೆ ಬಳಿಕ ಚಾಮುಂಡೇಶ್ವರಿ ಅಮ್ಮನವರು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಮರಳುವುದು.
ಅ. 27 ಭಾನುವಾರ ಬೆಳಿಗ್ಗೆ 10.10ರಿಂದ 10.45ರ ಒಳಗೆ ರತ್ನಖಚಿತ ಆಸನ ಬೇರ್ಪಡಿಸಿ ಖಜಾನೆಗೆ ಕೊಂಡೋಯ್ಯುವುದು.
KEY WORDS: MYSORE DASARA, A private event, to be held at, the palace, by the royal family.
SUMMARY:
MYSORE DASARA: The preparations for the private function in the palace are as follows.
The world-famous Mysore Dasara festival is a countdown. Preparations for a private ceremony at the palace. A private event to be held at the palace by the royal family.