ಮೈಸೂರು, ಮೇ 27, 2020 : (www.justkannada.in news ) ಮುಂದಿನ ಜೂ. 1 ರಿಂದ ದೇವಸ್ಥಾನಗಳನ್ನು ತೆರೆಯಬೇಕು ಎಂಬ ನಿಟ್ಟಿನಲ್ಲಿ ಈ ತನಕ ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸ್ಪಷ್ಟಪಡಿಸಿದರು.
ಬುಧವಾರ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದಿಷ್ಟು…
ದೇಗುಲ ಓಪನ್ ವಿಚಾರ ಮಾದ್ಯಮದಿಂದ ಮಾತ್ರ ತಿಳಿದಿದೆ. ನಮಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಈ ತನಕ ಯಾವುದೇ ಅಧಿಕೃತ ಲಿಖಿತ ಆದೇಶ ಬಂದಿಲ್ಲ. ಸಚಿವರ ಹೇಳಿಕೆಯನ್ನ ಮಾದ್ಯಮದಲ್ಲಷ್ಟೆ ನೋಡಿದ್ದೇನೆ. ಮೇ 31 ರ ನಂತರದ ಕೇಂದ್ರದ ಆದೇಶ ಏನೆಂದು ನೋಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೈಡ್ ಲೈನ್ಸ್ ಬಳಿಕವಷ್ಟೆ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕರೋನಾ ಮಾರ್ಗಸೂಚಿ :
ಕೊರೋನೊ ಭೀತಿ ಹಿನ್ನೆಲೆ ಮೈಸೂರು ರೆಡ್ ಝೋನ್ ಆಗಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ , ರೆಡ್ ಆರೆಂಜ್, ಗ್ರೀನ್ ಝೋನ್ ಪದ್ದತಿ ಸದ್ಯಕ್ಕಿಲ್ಲ. ಕಂಟೋನ್ಮೆಂಟ್ ಝೋನ್ ನಿರ್ವಹಿಸಲಿಕ್ಕಷ್ಟೇ ಮಾರ್ಗಸೂಚಿ ನೀಡಲಾಗಿದೆ. ಕಂಟೋನ್ಮೆಂಟ್ ಝೋನ್ ಗಳಲ್ಲೂ ಕೆಲ ಸಡಿಲಿಕೆ ಮಾಡಲಾಗಿದೆ. ಪೂರ್ತಿ ಏರಿಯಾ, ಗ್ರಾಮಗಳ ಬದಲು, ಸಂಬಂಧಿಸಿದ ಮನೆ ಮತ್ತು ಬೀದಿ ಮಾತ್ರ ನಿರ್ಬಂಧಿತ ಪ್ರದೇಶ ಮಾಡ್ತಿದ್ದೇವೆ. ಬಫರ್ ಝೋನ್ ಮಿತಿಯಲ್ಲು ಕಡಿತಗೊಳಿಸಲಾಗಿದೆ ಎಂದರು.
ಹೊರ ರಾಜ್ಯಗಳಿಗೆ ತೆರಳುವವರ ವಿಚಾರ
ಸದ್ಯಕ್ಕೆ ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್ ನ ನಿವಾಸಿಗಳನ್ನು ನಾಲ್ಕು ರೈಲುಗಳ ಮೂಲಕ ಕಳುಹಿಸಲಾಗಿದೆ. ಕೊನೆಯ ಎರಡು ರೈಲುಗಳಿಗೆ ಸರ್ಕಾರವೇ ಪ್ರಯಾಣದ ವೆಚ್ಚ ಭರಿಸಿದೆ.
ನಾಗಲ್ಯಾಂಡ್, ಮಣಿಪುರ,ಮಧ್ಯಪ್ರದೇಶ ಇತರೆ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ಬೆಂಗಳೂರಿನವರೆಗೆ ಬಸ್ ಮೂಲಕ ಕಳುಹಿಸಲಾಗುತ್ತಿದೆ. ಬೆಂಗಳೂರಿನಿಂದ ರೈಲು ಮೂಲಕ ತೆರಳಿದ್ದಾರೆ. ಇದೇ ರೀತಿ ನಾಳೆ ಮೈಸೂರಿನಿಂದ ೫೩ ಜನ ನಾಗಾಲ್ಯಾಂಡ್ ಗೆ ಬನ್ನಿಮಂಟಪದಿಂದ ಹೊರಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.
key words : mysore-DC-abhiram.g.shankar-media-reaction-about-temple-open-from-june.1