ಮೈಸೂರು,ಮಾ,19,2020(www.justkannada.in): ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲೆಯಾದ್ಯಂತ ಯುಗಾದಿ ಪುಣ್ಯಸ್ನಾನ ರದ್ದು ಮಾಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಹಾಗೆಯೇ ಮೈಸೂರಿನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಡಿಸಿ ಅಭಿರಾ ಜೀ ಶಂಕರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ಅಭಿರಾಮ್ ಜಿ ಶಂಕರ್ , ಮಾರ್ಚ್ 25ರಂದು ಯುಗಾದಿ ದಿನ ನಡೆಯಬೇಕಿದ್ದ ಪುಣ್ಯಸ್ನಾನ ನಡೆಸುವಂತಿಲ್ಲ. ಮೈಸೂರಿನ ನಂಜನಗೂಡು ಕಪಿಲಾನದಿ, ಟಿ.ನರಸೀಪುರದ ಕಾವೇರಿ ನದಿ ಸಮೀಪ ಸೇರಿದಂತೆ ಎಲ್ಲಿಯೂ ಸಾಮೂಹಿಕ ಪುಣ್ಯ ಸ್ನಾನ ಮಾಡುವಂತಿಲ್ಲ. ಯುಗಾದಿ ದಿನದಂದು ದೇವಾಲಯಗಳಿಗೆ ಜನರು ತೆರಳಬಾರದು. ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಇದ್ದು ಹಬ್ಬ ಆಚರಿಸಿ. ಜನಸಂದಣಿ ಸೃಷ್ಠಿಯಾಗದಂತೆ ನೋಡಿಕೊಳ್ಳೋದು ಸಾರ್ವಜನಿಕರ ಜವಬ್ದಾರಿ ಎಂದು ತಿಳಿಸಿದರು.
ಹಾಗೆಯೇ ಕೊರೋನಾ ಭೀತಿ ಹಿನ್ನೆಲೆ ಮೈಸೂರಿನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗಿದೆ. ಆದರೆ ಇದು ರಾಜ್ಯ ಸರ್ಕಾರದಿಂದ ಆದೇಶ ಆಗಬೇಕಿದೆ. ನಾಳೆ ಸಂಜೆವರೆಗೂ ನಾವು ಕಾಯುತ್ತೇವೆ. ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಭಿರಾಂ ಜೀ ಶಂಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿ ಆರಂಭದಲ್ಲೆ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್….
ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‌ರಿಂದ ಸುದ್ದಿಗೋಷ್ಠಿ ಆರಂಭದಲ್ಲೆ ಬೇಸರ ವ್ಯಕ್ತಪಡಿಸದರು. ಕೊರೋನಾ ಬಗ್ಗೆ ಮೈಸೂರು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೂ ಜನರಲ್ಲಿ ಇದರ ಗಂಭೀರತೆ ಅರಿವಾದಂತೆ ಕಾಣುತ್ತಿಲ್ಲ. ಯಾಕಾಗಿ ಜನರ ಇದನ್ನ ನಿರ್ಲಕ್ಷ್ಯಿಸುತ್ತಿದ್ದಾರೋ ಅದು ಸಹ ಗೊತ್ತಾಗುತ್ತಿಲ್ಲ. ರೋಗ ಹರಡದಂತೆ ನಾವೇಷ್ಟೆ ಕ್ರಮ ಕೈಗೊಂಡರು ಜನರು ಜಾಗೃತರಾಗುತ್ತಿಲ್ಲ. ಕೆಲವೊಂದು ಸೂಚನೆಗಳನ್ನ ಪಾಲಿಸುತ್ತಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಜನರು ಜಿಲ್ಲಾಡಳಿತದ ಎಲ್ಲಾ ಸೂಚನೆ ಪಾಲನೆ ಮಾಡಬೇಕು. ಜನರ ಸಹಕಾರವಿಲ್ಲದೆ ಕೊರೋನಾ ನಿಯಂತ್ರಣ ಸಾಧ್ಯವಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಬೇಸರ ವ್ಯಕ್ತಪಡಿಸಿದರು.
Key words: mysore- dc-Abhiram Jee Shankar-ugadi-Liquor- sales-ban