ಮೈಸೂರು, ಜೂ.19, 2021 : (www.justkannada.in news ) ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ನೆರವಾಗಲು ಕರ್ನಾಟಕ ಪ್ರದೇಶ ಬಲಿಜ ಸಂಘದಿಂದ ಜಿಲ್ಲಾಡಳಿತಕ್ಕೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಸಂಘದಿಂದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಉಪಕರಣಗಳನ್ನು ಸಂಘದ ಪದಾಧಿಕಾರಿಗಳು, ಮುಖಂಡರು ಹಸ್ತಾಂತರಿಸಿದರು. ಕಾನ್ಸಂಟ್ರೇಟರ್‌ಗಳು, ಮಕ್ಕಳಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಮಿನ್-ಸಿ ಮಾತ್ರೆಗಳು, ಮಾಸ್ಕ್‌ಗಳು,ಸ್ಯಾನಿಟೈಸರ್ ಮೊದಲಾದ ಉಪಕರಣಗಳನ್ನು ವಿತರಿಸಲಾಯಿತು. ಜಿಲ್ಲಾಡಳಿತದ ಪರವಾಗಿ ಉಪಕರಣಗಳನ್ನು ಸ್ವೀಕರಿಸಿದ ಡಿಸಿ, ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಬಲಿಜ ಸಂಘದ ಕಾರ್ಯದರ್ಶಿ ಸಿ.ಕೆ.ಜಗದೀಶ್ ಮಾತನಾಡಿ, ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿರುವ ಸಂಘವು ಈ ಬಾರಿ ವೈದ್ಯಕೀಯ ಉಪಕರಣಗಳನ್ನು ವಿತರಿಸುತ್ತಿದೆ. ಕೋಲಾರ,ಚಿಕ್ಕಬಳ್ಳಾಪುರ, ಬಳ್ಳಾರಿ, ಮಂಡ್ಯದಲ್ಲಿ ವಿತರಿಸಲಾಗಿದ್ದು,ಈಗ ಮೈಸೂರಿಗೆ ವಿತರಿಸಲಾಗಿದೆ ಎಂದರು.
ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದ್ದರಿಂದ ಉಪಕರಣಗಳ ಕೊರತೆಯಾಗಿದೆ. ಅನೇಕರಿಗೆ ಐಸಿಯು,ವೆಂಟಿಲೇಟರ್ ಸಿಗದೆ ಸಾವಿಗೀಡಾಗಿರುವುದರಿಂದ ತೀವ್ರ ಉಸಿರಾಟದಲ್ಲಿ ಇರುವವರಿಗೆ ನೆರವಾಗಲು ಕಾನ್ಸಂಟ್ರೇಟರ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.
ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್ ಎ ವೆಂಕಟೇಶ್ ಮಾತನಾಡಿ ಮನುಷ್ಯ ಜೀವನದಲ್ಲಿ ಮಾನವೀಯತೆ ದೊಡ್ಡದು. ಕರೋನಾ ಸಂಕಷ್ಟ ಕಾಲದಲ್ಲಿ ಹಲವು ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸಹಾಯದ ಹಸ್ತ ಚಾಚಿದ್ದಾರೆ. ಊಟದ ಕಿಡ್ ನೀಡುವಲ್ಲಿ ವೈದ್ಯಕೀಯ ಉಪಕರಣ ನೀಡಿ ಜನಪಕೋರಿ ಕೆಲಸಮಾಡಿದ್ದಾರೆ. ಇದೇ ರೀತಿಯಲ್ಲಿ ಕರ್ನಾಟಕ ಪ್ರದೇಶ್ ಬಲಿಜ ಸಂಘ ಕೂಡ ಕಷ್ಟಕಾಲದಲ್ಲಿ ಸಹಾಯ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಪಾರ ಜಿಲ್ಲಾಧಿಕಾರಿ ಬಿಎಸ್ ಮಂಜುನಾಥ ಸ್ವಾಮಿ, ಹೆಚ್ ಆರ್ ಗೋಪಾಲಕೃಷ್ಣ,ಪ್ರೊ. ರಂಗನಾಥ್, ಎಂ.ಜಿ.ಸೋಮಶೇಖರ್, ಡಿ.ಕೆ.ಸುರೇಶ್, ಡಾ. ಎಸ್ ಕೃಷ್ಣಪ್ಪ, ಡಾ ಟಿ ರಮೇಶ್, ಎಚ್ ವಿ ನಾಗರಾಜ್, ಹೇಮಕುಮಾರ್, ಡಾ. ಎಂ ಪಿ ರಾಘವೇಂದ್ರ, ಜಿ.ಎಂ.ದಿವಾಕರ್, ಆದಿಶೇಷ, ಕುಮಾರ್, ಪ್ರಭಾಕರ್, ದಿನೇಶ್, ರಾಜೇಶ್, ಶಂಕರ್ ಇನ್ನಿತರರು ಹಾಜರಿದ್ದರು.
key words : mysore-dc-office-covid-health-donation-baliga-association