ಮೈಸೂರು,ಜೂನ್,4,2021(www.justkannada.in): ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾಡಿರುವ ಕಿರುಕುಳ ಆರೋಪದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಕೊವಿಡ್ ಸಂದರ್ಭ ಹಿನ್ನೆಲೆ ಎಲ್ಲರ ಸಹಕಾರ ಬೇಕಾಗುತ್ತೆ. ಅಂಕಿ ಅಂಶಗಳನ್ನು ಅಧಿಕೃತವಾಗಿ ನಾವು ಕೊಡ್ತಿದ್ದೇವೆ. ಕೊರೋನಾ ವಿಚಾರದಲ್ಲಿ ಅಂಕಿ ಅಂಶ ತಪ್ಪಾಗಬಾರದು. ವಾರ್ಡ್ ಪಂಚಾಯಿತಿಗಳಲ್ಲಿ ಈವತ್ತು 40 ನಾಳೆ 400 ಬರಬಾರದು. ಅಂಕಿಅಂಶ ಸರಿ ಇರಬೇಕು ಎಂಬ ಕಾರಣಕ್ಕೆ ನಮ್ಮ ಒತ್ತಡ ಅಷ್ಟೇ. ನಾನು ಅಥಾರಿಟಿ ಅಲ್ಲ ಅನ್ನೋದನ್ನ ಸಿಎಸ್ ಕ್ಲಾರಿಫೈ ಮಾಡ್ತಾರೆ. ಆಫೀಸರ್ಸ್ ಸಮಸ್ಯೆ ಏನೇ ಇದ್ದರೂ ಫೋರಂ ಇರುತ್ತೆ ಅಲ್ಲಿ ಹೇಳಬಹುದು. ಹೈಯರ್ ಆರ್ಮಿ ಇರುತ್ತೆ ಅಲ್ಲಿ ಹೇಳಬಹುದಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಜುಲೈ ಒಳಗೆ ಜಿಲ್ಲೆಯನ್ನ ಕೋವಿಡ್ ಮುಕ್ತ ಮಾಡಬೇಕು. ಹೀಗಾಗಿ ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ಈ ಮಧ್ಯೆ ಸಿಎಸ್ ಮೈಸೂರಿಗೆ ಬರುತ್ತಿದ್ದಾರೆ, ಎಲ್ಲವನ್ನು ಅವರ ಗಮನಕ್ಕೆ ತರುತ್ತೇನೆ. ಈಗಾಗಲೇ ನಾನು ಹೇಳಬೇಕಾದುದನೆಲ್ಲಾ ಪ್ರೆಸ್ ನೋಟ್ ನಲ್ಲಿ ಹೇಳಿದ್ದೇನೆ. ಸಮನ್ವಯತೆ ಸಮಸ್ಯೆಯಾಗಿತ್ತು ಎಂಬ ಭಾವನೆ ನನಗಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದರು.
Key words: mysore DC -Rohini Sindhuri- First- Reaction- Shilpanag- Allegation