ಮೈಸೂರು,ಮೇ.19,2021(www.justkannada.in): ಕೋವಿಡ್-19 ಚಿಕಿತ್ಸೆಗಾಗಿ ಪಿ.ಕೆ.ಟಿ.ಬಿ ಆವರಣದಲ್ಲಿನ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿರುವ ಡೆಸಿಗ್ನೇಟೆಡ್ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ಐಸಿಯು ಘಟಕದ ಅಂತಿಮ ಸಿದ್ಧತೆಯನ್ನು ಬುಧವಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪರಿಶೀಲಿಸಿದರು.
ಈ ಆಸ್ಪತ್ರೆಯಲ್ಲಿ 30 ಐಸಿಯು ಹಾಗೂ 40 ಎಚ್ ಡಿಯು ಹಾಸಿಗೆಗಳು ಚಿಕಿತ್ಸೆಗಾಗಿ ದೊರೆಯಲಿದೆ. ಕ್ರಮೇಣ 100 ಐಸಿಯು ಹಾಸಿಗೆವರೆಗೂ ವಿಸ್ತರಿಸಲಾಗುವುದು. ಕೋವಿಡ್ ವಾರ್ ರೂಂ ಮೂಲಕ ಸೋಂಕಿತರನ್ನು ಚಿಕಿತ್ಸೆಗಾಗಿ ಗುರುವಾರ ಸಂಜೆಯಿಂದ ದಾಖಲು ಮಾಡಿಕೊಳ್ಳಲಾಗುತ್ತದೆ.
ಜಿಲ್ಲಾಡಳಿತ, ಎಂಎಂಸಿ&ಆರ್‌ಐ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಕಲ್ಯಾಣಿ ಮೆರಿಟಾರ್ ಫೌಂಡೇಶನ್ ಹಾಗೂ ಆಶಾಕಿರಣ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಿವೆ.
ಇದೇ ಸಂದರ್ಭದಲ್ಲಿ ಪಿ.ಕೆ.ಟಿ.ಬಿ ಆವರಣದಲ್ಲಿ ನಿರ್ಮಿಸುತ್ತಿರುವ 30 ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಕೂಡ ಡಿಸಿ ರೋಹಿಣಿ ಸಿಂಧೂರಿ ಪರಿಶೀಲಿಸಿದರು. ಈ ವೇಳೆ ಶಾಸಕ ಎಲ್.ನಾಗೇಂದ್ರ ಅವರು ಪರಿಶೀಲನೆಯಲ್ಲಿ ಭಾಗಿಯಾಗಿದ್ದರು.
ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಿ.ಪಿ.ನಂಜರಾಜ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮುಖ್ಯಸ್ಥ ಡಾ.ಸಂತೃಪ್ತ್, ಆಶಾಕಿರಣ ಚಾರಿಟಬಲ್ ಟ್ರಸ್ಟ್‌ನ ಗುರುರಾಜ್, ಕಲ್ಯಾಣಿ ಮೆರಿಟಾರ್ ಫೌಂಡೇಶನ್ ನ ಮುತ್ತುರಾಜ್, ನೋಡಲ್ ಅಧಿಕಾರಿ ಡಾ.ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: Mysore DC- Rohini Sindhuri- Inspection-ICU – Super Specialty Hospital.