ಮೈಸೂರು,ನವೆಂಬರ್,28,2020(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ಮತ್ತು ಎಂಎಲ್ ಸಿ ರಘು ಆಚಾರ್ ನಿನ್ನೆಯಷ್ಟೇ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೆ ಇದೀಗ ಮತ್ತೊಬ್ಬ ಶಾಸಕ ಡಿಸಿ ರೋಹಿಣಿ ಸಿಂಧೂರಿ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು, ಮಾಜಿ ಸಚಿವ ಹಾಗೂ ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಸಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮೈಸೂರು ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿಯವರ ಆಟ ನಡೆಯುವುದಿಲ್ಲ. ಬೇಕಿದ್ದರೇ ರಾಜಕೀಯಕ್ಕೆ ಬರಲಿ, ಚುನಾವಣೆಗೆ ಸ್ಪರ್ಧಿಸಲಿ. ಮೈಸೂರಿನ ಜನತೆ ಸ್ವಾಭಿಮಾನದಿಂದ ಬದುಕುತ್ತಿರುವವರು. ಸ್ವಾಭಿಮಾನಕ್ಕೆ ಧಕ್ಕೆ ಆದರೆ ಜನರು ಸಹಿಸುವುದಿಲ್ಲ ಎಂದು ಹರಿಹಾಯ್ದಿದ್ದಾರೆ.
ಶಾಸಕ ಹೆಚ್.ಪಿ.ಮಂಜುನಾಥ್ ರೋಹಿಣಿ ಸಿಂಧೂರಿಯನ್ನು ಮೂರನೇ ಮಹಾರಾಣಿಯಾಗಿ ಮೆರೆಯಬೇಡಿ ಎಂದು ಹೇಳಿದ್ದಾರೆ. ಜಂಬೂಸವಾರಿ ಮೆರವಣಿಗೆ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಲು ಹೋಗಿದ್ದ ರೋಹಿಣಿ ಸಿಂಧೂರಿಯವರನ್ನು ನೋಡಿ ಮಂಜುನಾಥ್ ಆ ರೀತಿ ಹೇಳಿರಬಹುದು ಎಂದು ಶಾಸಕ ಸಾ.ರಾ ಮಹೇಶ್ ತಿಳಿಸಿದರು.
ಶಾಸಕರನ್ನು ಕಡೆಗಣಿಸಿ ಸಭೆ ನಡೆಸಿದರೆ ಆಗುವ ಪರಿಣಾಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತವೇ ಹೊಣೆ.
ಶಾಸಕ ಮಂಜುನಾಥ್ ಗೆ ಬರೆದ ಪತ್ರವನ್ನು ಬಹಿರಂಗ ಪಡಿಸಿರುವ ಬಗ್ಗೆಯೂ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸಾ.ರಾ ಮಹೇಶ್, ಇದು ನಿಮಗೆ ಶೋಭೆ ತರುವುದಿಲ್ಲ. ಶಾಸಕರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದರೆ ಸುಮ್ಮನಿರುವುದಿಲ್ಲ. ಶಾಸಕರನ್ನು ಕಡೆಗಣಿಸಿ ಸಭೆ ನಡೆಸಿದರೆ ಆಗುವ ಪರಿಣಾಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತವೆ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶಿಷ್ಟಾಚಾರ ಪಾಠ ಮಾಡಿದ ಸಾ.ರಾ ಮಹೇಶ್…
ಇದೇ ವೇಳೆ ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಶಿಷ್ಟಾಚಾರದ ಪಾಠ ಮಾಡಿದ ಶಾಸಕ ಸಾ ರಾ ಮಹೇಶ್. ಕೆಡಿಪಿ ಸಭೆಯಲ್ಲಿ ವೇದಿಕೆ ಮೇಲೆ ಡಿಸಿ ಕುಳಿತು ಕೊಳ್ಳುವಂತಿಲ್ಲ. ಇದು ಪಾಲಿಸುವ ಹಾಗೂ ಇರುವ ಶಿಷ್ಟಾಚಾರ. ಇದೀಗ ಇದರ ಪಾಲನೆ ಆಗ್ತಿಲ್ಲ. ಮುಖ್ಯ ಕಾರ್ಯದರ್ಶಿ ಕೂಡ ಸಚಿವರ ಪಕ್ಕದಲ್ಲಿ ಕುಳಿತುಕೊಳ್ಳುವ ಆಗಿಲ್ಲ. ಇದು ಕೆಡಿಪಿ ಸಭೆಯಲ್ಲಿ ಪಾಲನೆಯಾಗಬೇಕಾದ ಶಿಷ್ಟಾಚಾರ ಎಂದು ಹೇಳಿದರು.
english summary…
Rohini Sindhoori cannot bend us – MLA Sa. Ra. Mahesh
Mysuru, Nov. 28, 2020 (www.justkannada.in): Former Minister and K.R. Nagara MLA and former JD(S) minister Sa. Ra. Mahesh has expressed his ire upon Mysuru District Deputy Commissioner Rohini Sindhoori.
Addressing a press meet in Mysuru today he said that Rohini Sindhoori cannot do whatever she wishes. If she wants to come to politics let her come, let her face elections. The people of Mysuru are living their lives with self-respect, they won’t tolerate if anyone hurts their self-respect.
Expressing his dissatisfaction about publicizing the letter written by her to Hunsur MLA H.P. Manjunath he said that it was not correct and it would not bring respect to a DC. “We won’t keep quiet if meetings are held in the absence of elected representatives. She will be held responsible if meetings are conducted without elected representatives in the future,” he warned.
He said that Rohini Sindhoori might not know about the protocol. “A DC should not sit on the dais in KDP meetings. But now it is not being followed. Even the Chief Secretary should not sit beside the Minister, which should be followed in KDP meetings,” he added.
Keywords: Sa.Ra. Mahesh/ Mysore DC/ Rohini Sindhoori
Key words: mysore dc-Rohini Sindhuri- not – Mysore district – MLA –sara Mahesh