ಯು.ಕೆ.ಯಿಂದ ಮೈಸೂರಿಗೆ ಆಗಮಿಸಿದ 137 ಮಂದಿಗೂ ಕೋವಿಡ್ ಪರೀಕ್ಷೆ :  ರೋಹಿಣಿ ಸಿಂಧೂರಿ

 

ಮೈಸೂರು, ಡಿಸೆಂಬರ್ 23,2020:
ರೂಪಾಂತರಗೊಂಡ ಕೋವಿಡ್ ವೈರಸ್ ಯು.ಕೆ.ನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮೈಸೂರು ಜಿಲ್ಲಾಡಳಿತ ಕಟ್ಟಿನ ಕ್ರಮಕ್ಕೆ ಮುಂದಾಗಿದೆ.

ಬುಧವಾರ ಸಂಜೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಡಿಸೆಂಬರ್ 1ರಿಂದ 20 ರ ವರೆಗೆ 119 ಜನರು ಹಾಗೂ ಡಿಸೆಂಬರ್ 21 ರಂದು 18 ಜನರು ಸೇರಿದಂತೆ ಒಟ್ಟು 137 ಜನರು ಬ್ರಿಟನ್‌ನಿಂದ ಮೈಸೂರಿಗೆ ಬಂದಿದ್ದಾರೆ ಎಂದು ಹೇಳಿದರು.

mysore- DC- rohini-sindoori- covid- Britain-return.test

ಡಿ. 21ರಂದು ವಾಪಾಸ್ಸಾದ ಎಲ್ಲಾ ಬ್ರಿಟನ್ ಪ್ರಯಾಣಿಕರ ಕೋವಿಡ್-19 ಪರೀಕ್ಷೆ ಆಗಿದೆ. ಡಿ‌20ಕ್ಕೂ ಮೊದಲು ಬಂದ ಕೆಲವರು ಪರೀಕ್ಷೆಗೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 21ರಂದು ಬಂದಿರುವ ಎಲ್ಲಾ 18 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಡಿಸೆಂಬರ್ 20ಕ್ಕೂ ಮೊದಲು ಬಂದಿರುವ ಎಲ್ಲರು ಮುನ್ನೆಚ್ಚರಿಕೆಯಾಗಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬ್ರಿಟನ್‌ನಿಂದ ವಾಪಾಸ್ಸಾದವರ ಕೋವಿಡ್ ಪರೀಕ್ಷೆಗೆ ಡಿಸೆಂಬರ್ 24 ರಂದು ಗುರುವಾರ ಮೈಸೂರಿನ ಟೌನ್‌ಹಾಲ್‌ನಲ್ಲಿ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿದೆ. ಬೆಳಗ್ಗೆ‌ 10 ಗಂಟೆಯಿಂದ‌ ಸಂಜೆ 4 ಗಂಟೆ ವರೆಗೆ ಕೌಂಟರ್ ತೆರೆದಿರುತ್ತದೆ. ವಾರ್ ರೂಂ ನಿಂದ ಅವರೆಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

mysore- DC- rohini-sindoori- covid- Britain-return.test

ರೋಗ ಲಕ್ಷಣ ಇರುವವರು ಹಾಗೂ ಈ 137 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಇದ್ದವರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ನಂಜರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಮರನಾಥ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words : mysore- DC- rohini-sindoori- covid- Britain-return.test