ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಸಲ್ಲಿಸಿದ ಪ್ರೊ.ಕೆ.ಎಸ್.ಭಗವಾನ್ .!

 

ಮೈಸೂರು, ಡಿ.01, 2020 : (www.justkannada.in news ) : ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದಿರುವ ಪತ್ರವನ್ನು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಲ್ಲಿಸಲಾಯಿತು.

ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ನೇತೃತ್ವದಲ್ಲಿ ಆರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಪದಾಧಿಕಾರಿಗಳು ಮಂಗಳವಾರ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

logo-justkannada-mysore

ಆರಸು ರವರ ಪ್ರತಿಮೆ ಸಾಂಸ್ಕೃತಿಕ ನಗರಿಯಲ್ಲಿ ಈತನಕ ನಿರ್ಮಾಣವಾಗಿಲ್ಲ. ಇದು ವಿಪರ್ಯಾಸದ ಸಂಗತಿ, ಆರಸು ರವರು ನಮ್ಮ ದೇಶ ಮತ್ತು ರಾಜ್ಯ ಮೆಚ್ಚಿಕೊಂಡ ವ್ಯಕ್ತಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಎಂದೇ ಜನಜನಿತರಾದವರು. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆಧಿಕಾರವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ಎಲ್.ಜಿ ಹಾವನೂರು ಅವರ ತೃತ್ವದಲ್ಲಿ ಸ್ಥಾಪಿಸಿದರು. ಹಾಗೂ ಭೂಸುಧಾರಣೆ ಮತ್ತು ಉಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತಂದು ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಮೈಸೂರಲ್ಲಿ ದೇವರಾಜ ಆರಸು ಪ್ರತಿಮೆ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Mysore-dc-rohini.sindoori-prof.k.s.baghavan-memorandum-devaraj.arasu-statue-Mysore

ಮನವಿ ಸಲ್ಲಿಸುವ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂವ೯ ಅಧ್ಯಕ್ಷ ಎಂ. ಚಂದ್ರಶೇಖರ್, ಪ್ರತಿಮೆ ಪ್ರತಿಷ್ಟಾಪನೆ ಸಮಿತಿ ಅಧ್ಯಕ್ಷ ಜಾಕಿರ್ ಹುಸೇನ್, ಕನ್ನಡ ಹೋರಾಟಗಾರ ಡೈರಿ ವೆಂಕಟೇಶ್ ಉಪಸ್ಥಿತರಿದ್ದರು.

 

key words : Mysore-dc-rohini.sindoori-prof.k.s.baghavan-memorandum-devaraj.arasu-statue-Mysore