ಮೈಸೂರು,ಅಕ್ಟೋಬರ್, 23,2020(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನವೇ ತಮ್ಮನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಅವರು ಸಿಎಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು ಅಂತಿಮ ತೀರ್ಪು ಅಧಿಕೃತವಾಗಿ ಹೊರಬೀಳುವುದು ಮಾತ್ರ ಬಾಕಿ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಅಡ್ವೊಕೇಟ್ ಜನರಲ್ ಅಫಿಡವೆಟ್ ಸಲ್ಲಿಸಿ, ಅರ್ಜಿದಾರರಾದ ಬಿ.ಶರತ್ ಅವರ ಅರ್ಜಿಯನ್ನು ತಿರಸ್ಕರಿಸುವಂತೆ ಸಿಎಟಿಗೆ ಮನವಿ ಮಾಡಿದ್ದರು.
ಕೋವಿಡ್ ನಂಥ ಪೆಂಡಮಿಕ್ ನಿಯಂತ್ರಿಸುವ ಸಲುವಾಗಿಯೇ ಮುಖ್ಯಮಂತ್ರಿಗಳು ತಮಗಿರುವ ಪರಮಾಧಿಕಾರ ಬಳಸಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ನೇಮಕ ಮಾಡಿದ್ದು. ಆದ್ದರಿಂದ ಈ ಪರಿಸ್ಥಿತಿಯಲ್ಲಿ ಬಿ.ಶರತ್ ಅವರ ಅರ್ಜಿಯನ್ನು ಪರಿಗಣಿಸುವುದು ಸೂಕ್ತವಲ್ಲ. ಜತೆಗೆ ಶರತ್, ತಮ್ಮ ಆರೋಗ್ಯದ ಬಗೆಗೂ ಮಾಹಿತಿ ನೀಡಿದ್ದು, ಈ ಹಂತದಲ್ಲಿ ಮೈಸೂರು ಜಿಲ್ಲಾಧಿಕಾರಿ ಹುದ್ದೆ ನಿಭಾಯಿಸಲು ಅವರು ಅರ್ಹರಲ್ಲ. ಆದ್ದರಿಂದ ಶರತ್ ರ ಅರ್ಜಿಯನ್ನು ತಿರಸ್ಕರಿಸಿ ಎಂದು ಸರಕಾರದ ಪರವಾಗಿ ಸಿಎಟಿಗೆ ಮನವಿ ಮಾಡಿದ್ದಾರೆ.
ಅರ್ಜಿದಾರರ ಪರ ಹಾಗೂ ಸರಕಾರದ ಪರವಾಗಿ ಮಂಡಿಸಿದ ವಾದಗಳನ್ನು ಸಿಎಟಿ ಆಲಿಸಿದ್ದು, ಅಂತಿಮ ತೀರ್ಪು ನೀಡಬೇಕಾಗಿದೆ. ಆದರೆ ಡಿ. 31ರ ತನಕ ಕೋರ್ಟ್ ರಜೆ ಇರುವ ಕಾರಣ, ರಜೆ ಬಳಿಕವಷ್ಟೆ ಅಂತಿಮ ತೀರ್ಪು ಹೊರಬೀಳಲು ಸಾಧ್ಯ. ಹಾಗಾಗಿ ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲಿ ಸಿಎಟಿ ಫೈನಲ್ ಜಡ್ಜ್ ಮೆಂಟ್ ಹೊರ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.
ooooo
key words : mysore-DC-rohini.sindoori-sharath-transfer-CAT-judgment