ನಾಡಹಬ್ಬ ದಸರಾ ಉದ್ಘಾಟನೆ ದಿನದಂದೇ ಮೈಸೂರು ಡಿಸಿಗೆ ಹಿನ್ನೆಡೆ..!

 

ಮೈಸೂರು, ಅ.17, 2020 : (www.justkannada.in news) : ಕೋವಿಡ್ ಕಾರಣ, ನಾಡಹಬ್ಬ ದಸರಾ ಆಚರಣೆ ವೇಳೆ ಮುಂಜಾಗ್ರತ ಕ್ರಮವಾಗಿ ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನು ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಇದೀಗ ರದ್ದುಗೊಳಿಸಿದೆ.

ದಸರ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಫೇಸ್ ಬುಕ್ ಲೈವ್ ಮೂಲಕ ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ ಹಾಗೂ ಧಾರ್ಮಿಕ ಸ್ಥಳಗಳಾದ ಚಾಮುಂಡಿಬೆಟ್ಟ, ನಂಜನಗೂಡು ನಂಜುಂಡೇಶ್ವರ ದೇವಾಲಯಗಳನ್ನು ನ.01 ರ ವರೆಗೆ ಬಂದ್ ಮಾಡಲು ಆದೇಶಿಸಿ ಸಾರ್ವಜನಿಕರ ಸಹಕಾರ ಕೋರಿದ್ದರು.

ಮೈಸೂರಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆಯನ್ನು ರೋಹಿಣಿ ಸಿಂಧೂರಿ ಒತ್ತಿ ಹೇಳಿದ್ದರು.

Mysore-dc-rohini-sindoori-tourist-place-closer-order-withdrawn-by-cm-yadiyurappa-set.back-to-Mysore-dc

ಆದರೆ ಮರುದಿನವೇ ಜಿಲ್ಲಾಧಿಕಾರಿಗಳ ಈ ಆದೇಶದ ವಿರುದ್ಧ ಮೈಸೂರಿನ ಹೊಟೇಲ್ ಮಾಲೀಕರ ಸಂಘ, ಟ್ರಾವೆಲ್ಸ್ ಅಸೋಸಿಯೇಷನ್, ಪ್ರವಾಸಿ ಗೈಡ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದವು. ಜಿಲ್ಲಾಡಳಿತದ ಈ ನಿರ್ಧಾರದಿಂದ ನಮಗೆ ಅನಾನುಕೂಲವಾಗುತ್ತದೆ ಎಂದು ಅವಲತ್ತುಕೊಂಡಿದ್ದವು. ಈ ಕೂಡಲೇ ರದ್ದತಿ ಆದೇಶವನ್ನು ಹಿಂಪಡೆಯಬೇಕು ಎಂದು ಸರಕಾರದ ಮೇಲೆ ಒತ್ತಡವನ್ನು ಹೇರಿದ್ದವು.

ಇದೀಗ ಈ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೋವಿಡ್ ನಿಯಂತ್ರಣದ ಸಲುವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮುಂಜಾಗ್ರತ ಕ್ರಮವಾಗಿ ಕೈಗೊಂಡಿದ್ದ ಆದೇಶವನ್ನು ರದ್ದುಪಡಿಸಿ, ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಮತಿ ನೀಡಿದ್ದಾರೆ. ಸರಕಾರದ ಈ ಕ್ರಮವನ್ನು ಹೊಟೇಲ್ ಮಾಲೀಕರ ಸಂಘ, ಟ್ರಾವೆಲ್ಸ್ ಅಸೋಸಿಯೇಷನ್, ಪ್ರವಾಸಿ ಗೈಡ್ಸ್ ಅಸೋಸಿಯೇಷನ್ ಸ್ವಾಗತಿಸಿವೆ.

 

Mysore-dc-rohini-sindoori-tourist-place-closer-order-withdrawn-by-cm-yadiyurappa-set.back-to-Mysore-dc

key words : Mysore-dc-rohini-sindoori-tourist-place-closer-order-withdrawn-by-cm-yadiyurappa-set.back-to-Mysore-dc