ತಲಕಾಡು ಪಂಚಲಿಂಗ ದರ್ಶನದ ಪಲ್ಲಕ್ಕಿ ಉತ್ಸವದಲ್ಲಿ ಐಎಎಸ್ ಅಧಿಕಾರಿ ಬಿ.ಶರತ್..!

 

ಮೈಸೂರು, ಡಿ.24, 2020 : (www.justkannada.in news) ಕಳೆದ ವಾರ ಮುಕ್ತಾಯಗೊಂಡ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಸಮಾರಂಭದಲ್ಲಿ ಐಎಎಸ್ ಅಧಿಕಾರಿ ಬಿ.ಶರತ್ ಭಾಗವಹಿಸಿದ್ದರು.

ಡಿ. 17 ರಂದು ನಡೆದ ಪಲ್ಲಕ್ಕಿ ಉತ್ಸವದಲ್ಲಿ ಬಿ.ಶರತ್ ( ಮೈಸೂರಿನಿಂದ ವರ್ಗಾಯಿತರಾಗಿರುವ ಜಿಲ್ಲಾಧಿಕಾರಿ, ಪ್ರಸ್ತುತ ಸಿಎಟಿ ಯಲ್ಲಿ ಸರಕಾರದ ವರ್ಗಾವಣೆ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಯುತ್ತಿದ್ದು ತೀರ್ಪು ಹೊರ ಬೀಳುವ ಹಂತದಲ್ಲಿದೆ ) ಭಾಗವಹಿಸಿದ್ದ ಫೋಟೋಗಳನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.

mysore-dc-transfer-CAT-talakadu-panchalingadarshana-sharath-attended

ಡಿ. 17 ರಂದು ರಾತ್ರಿ ನಡೆದ ದೇವರ ಪಲ್ಲಕ್ಕಿ ಉತ್ಸವದಲ್ಲಿ ಬಿ.ಶರತ್ ಅವರು ಭಾಗವಹಿಸಿ, ಪಲ್ಲಕ್ಕಿ ಮೆರವಣಿಗೆಯಲ್ಲಿ ಖುದ್ದು ಹೆಗಲು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರನ್ನು ಸರಕಾರ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಶರತ್ ಸಿಎಟಿ ಮೆಟ್ಟಿಲೇರಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಸರಕಾರದ ವರ್ಗಾವಣೆ ಆದೇಶವನ್ನು ಪಾಲಿಸಿರಲಿಲ್ಲ.
ಸರಕಾರದ ವರ್ಗಾವಣೆ ಆದೇಶವನ್ನು ಬಿ.ಶರತ್ ಅವರು ಪಾಲಿಸಿಲ್ಲ. ಇದಕ್ಕೆ ಅನಾರೋಗ್ಯದ ಕಾರಣವನ್ನೇ ಅವರೇ ನೀಡಿದ್ದಾರೆ. ಆದ್ದರಿಂದ ಕೋವಿಡ್ ನಂಥ ಈ ಸಂದರ್ಭದಲ್ಲಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡುವುದು ಎಷ್ಟು ಸರಿ..? ಆದ್ದರಿಂದ ಅವರ ಅರ್ಜಿಯನ್ನು ಪುರಸ್ಕರಿಸಬೇಡಿ ಎಂದು ಸರಕಾರ ಸಿಎಟಿಗೆ ಅಫಿಡವಿಟ್ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

mysore-dc-transfer-CAT-talakadu-panchalingadarshana-sharath-attended

ಇದೀಗ ಸಿಎಟಿ ಯಲ್ಲಿ ಬಿ.ಶರತ್ ವರ್ಗಾವಣೆಗೆ ಸಂಬಂಧಿಸಿದಂತೆ ವಾದ-ಪ್ರತಿವಾದಗಳೆರಡು ಪೂರ್ಣಗೊಂಡಿದ್ದು ಅಂತಿಮ ತೀರ್ಪು ಸದ್ಯದಲ್ಲೇ ಹೊರ ಬೀಳಲಿದೆ.

 

key words : mysore-dc-transfer-CAT-talakadu-panchalingadarshana-sharath-attended