ಮೈಸೂರು,ಡಿಸೆಂಬರ್,21,2020(www.justkannada.in): ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬಿ. ಎಸ್ ಯಡಿಯೂರಪ್ಪ ವಿರುದ್ಧ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಫುಲ್ ಗರಂ ಆಗಿದ್ದಾರೆ.
ಡಿಸಿ ವರ್ಗಾವಣೆ ವಿವಾದ ಕುರಿತು ಮಾತನಾಡಿರುವ ಸಂಸದ ಶ್ರೀನಿವಾಸ್ ಪ್ರಸಾದ್, ಡಿಸಿ ಶರತ್ ಅವರನ್ನ ಒಂದೆ ತಿಂಗಳಲ್ಲಿ ಎತ್ತಂಗಡಿ ಮಾಡಿದ್ದು ಸಿಎಂ ತಪ್ಪು ನಿರ್ಧಾರ. ರೋಹಿಣಿ ಸಿಂಧೂರಿಗೆ ಜಾಗ ತೋರಿಸಬೇಕೆಂದಿದ್ದರೆ ಬೇರೆ ಕಡೆ ಅವಕಾಶ ಕೊಡಬೇಕಿತ್ತು. ಅವಳು ದುರಹಂಕಾರಿ, ಜನಪ್ರತಿನಿಧಿಗಳಿಗೆ ಗೌರವ ಕೊಡಲ್ಲ ಅನ್ನೋ ಕಾರಣಕ್ಕಲ್ವೇ ನಾನ್ ಎಕ್ಸಿಕ್ಯೂಟಿವ್ ಪೋಸ್ಟ್ಗೆ ಹಾಕಿದ್ದು. ಈಗ ಅವಳನ್ನೇ ಮೈಸೂರು ಡಿಸಿಯಾಗಿ ನೇಮಿಸಿದ್ದು ನನಗೆ ಸುತಾರಾಂ ಇಷ್ಟ ಆಗಲಿಲ್ಲ ಎಂದು ಕಿಡಿಕಾರಿದ್ದಾರೆ.
ಗುಲ್ಬರ್ಗಾದಲ್ಲಿ ಶರತ್ ಗೆ ಒಳ್ಳೆ ಹೆಸರಿತ್ತು. ಅವರನ್ನ ಇಲ್ಲಿಗೆ ವರ್ಗಾವಣೆ ಮಾಡಿ 29 ದಿನದಲ್ಲಿ ಬೇರೆ ಕಡೆ ಹಾಕಿದ್ದು ಎಷ್ಟು ಸರಿ..? ಎಂದು ಪ್ರಶ್ನಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್, ಇಂತಹ ವಿಚಾರದಲ್ಲಿ ಸಿಎಂ ವಿವೇಚನೆಯಿಂದ ವರ್ತಿಸಬೇಕು. ಚಾಮರಾಜನಗರ ಎಸ್ಪಿಯನ್ನ ವರ್ಗಾವಣೆ ಮಾಡಿದಾಗಲೇ ನಾನು ವಾರ್ನಿಂಗ್ ಮಾಡಿದ್ದೆ. ಡಿಜಿ ಪ್ರವೀಣ್ ಸೂದ್ ಜೊತೆಗೂ ಮಾತನಾಡಿದ್ದೆ. ಎಸ್ಪಿ ಕೋವಿಡ್ ಟೈಂನಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ, ಯಾಕೆ ಒಂದೇ ವರ್ಷದಲ್ಲಿ ವರ್ಗಾವಣೆ ಮಾಡ್ತೀರ ಅಂತ ಎಂದು ತಿಳಿಸಿದರು.
English summary…..
Mysuru DC transfer dispute: MP Srinivas Prasad angry on CM BSY
Mysuru, Dec. 21, 2020 (www.justkannada.in): Chamarajangara MP V. Srinivas Prasad has expressed his dissatisfaction on Chief Minister B.S. Yedyurappa with respect to the dispute of transfer of Mysuru Deputy Commissioner.
Speaking in Mysuru today, MP V. Srinivas Prasad said the Chief Minister’s decision on transferring Deputy Commissioner Sharath within one month is wrong. If he wanted to show a place to Rohini Sindhoori he could have thought about some other place. “Is it not she was given a non-executive post because of her arrogance and disrespect to the elected representatives?! I didn’t like her being posting to Mysuru as DC,” he said.
“Sharath had a nice name in Kalaburagi. He was posted to Mysuru and was transferred within 29 days, is it correct?! The CM should behave with more conscience in such matters. I had cautioned him when he had transferred the Chamarajanagara Superintendent of Police. I had also spoken to DG Praveen Sood regarding that. I had questioned him why he was transferred within one year when he has done good work during COVID time?,” he said.
Keywords: Chamarajanagar MP V. Srinivas Prasad/ B.S. Yedyurappa/ Rohini Sindhoori/ Mysuru DC/ transfer/ DC Sharath
Key words: Mysore DC –transfer- controversy-CM BS yeddyurappa- MP Srinivas Prasad