ಮೈಸೂರು, ಜುಲೈ 19, 2020 (www.justkannada.in): ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದೆ.
ಕೋವಿಡ್ -19 ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು. ಇದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ನಿರಂತರ ಏರಿಕೆಯಾಗುತ್ತಿರುವ ಕೊರಾನಾ. ಕೊರಾನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಡಿಸಿಪಿ ಪ್ರಕಾಶ್ ಗೌಡ, ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ, ಜಿ.ಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತಿ.
ಡಿಸಿ ಉತ್ತಮ ಕೆಲಸ ಮಾಡ್ತಿದ್ದಾರೆ: ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ಶ್ರಮ ಪಡುತ್ತಿದ್ದಾರೆ. ಅದ್ರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೋವಿಡ್ ಅಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಯಿಲ್ಲ. ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕೋವಿಡ್ ಅಸ್ಪತ್ರೆ ಗಳಲ್ಲಿ ಸೊಳ್ಳೆಕಾಟ ಇದೆ, ನೀರು ಬರ್ತಿಲ್ಲ, ಊಟ ಇಲ್ಲ ಅಂತ ಫೋನ್ ಮಾಡ್ತಿದ್ದಾರೆ. ಸರ್ಕಾರ ಹಣ ನೀಡುತ್ತೆ ಕೆಲಸ ಮಾಡುವುದಕ್ಕೆ ನಮಗೇನು ಸಮಸ್ಯೆ. ಕೋವಿಡ್ ಅಸ್ಪತ್ರೆ ಗಳಲ್ಲಿ ‘ಡಿ ಗ್ರೂಪ್’ ನೌಕರರ ಸಮಸ್ಯೆ ಇದೆ. ಸೊಂಕು ದೃಢ ಆಗಿ ಎರಡು ದಿನ ಅದ್ರು ವ್ಯಕ್ತಿಗಳನ್ನ ಆಸ್ಪತ್ರೆಗೆ ರವಾನೆ ಮಾಡಿಲ್ಲ ಎಂದು ಶಾಸಕ ಎಲ್.ನಾಗೇಂದ್ರ ಪ್ರಶ್ನಿಸಿದರು.