ಮೈಸೂರು,ಸೆಪ್ಟಂಬರ್,7,2021(www.justkannada.in): ಪೊಲೀಸರೆಂದರೆ ಸದಾ ಬ್ಯೂಸಿ ಇರುತ್ತಾರೆ, ಒತ್ತಡದಲ್ಲಿ ಕೆಲಸ ಮಾಡುತ್ತಾರೆ ಎಂಬ ಮಾತಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಮೈಸೂರು ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಪಿಎಚ್.ಡಿ ಪ್ರಬಂಧ ಬರೆದು 101ನೇ ಮೈಸೂರು ವಿವಿ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಕನ್ನಡ ಚಲನಚಿತ್ರಗಳಲ್ಲಿ ಪೊಲೀಸ್ ವ್ಯವಸ್ಥೆ ಪ್ರತಿನಿಧೀಕರಣ: ಸಾಂಸ್ಕೃತಿಕ ಅಧ್ಯಯನ’ ಕುರಿತು 5 ವರ್ಷಗಳ ಸಂಶೋಧನೆ ನಡೆಸಿ ಡಿಸಿಪಿ ಬಿ.ಟಿ. ಕವಿತಾ ಅವರು ಪಿಎಚ್.ಡಿ ಪೂರೈಸಿದ್ದಾರೆ. ಡಿಸಿಆರ್ಇ ವಿಂಗ್ನಲ್ಲಿ ಸದ್ಯ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾರಂಗದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಪ್ರತಿನಿಧಿಸಿದ ಮೊದಲ ಸಂಶೋಧನೆ ಇದಾಗಿದೆ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಎನ್.ಕೆ.ಲೋಲಾಕ್ಷಿ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧೀಕ್ಷಕರಾಗಿರುವ ನನ್ನ ಪತಿ ಆರ್.ನಾಗಶಯನ ಅವರೂ ಉತ್ತಮ ಸಹಕಾರ ನೀಡಿದ್ದಾರೆ. ನನ್ನ ಪೊಲೀಸ್ ಇಲಾಖೆಯ ಸಹಕಾರ ಸಾಕಷ್ಟಿತ್ತು. ಸದ್ಯ ಮುಂದಿನ ದಿನಗಳಲ್ಲಿ ಈ ಸಂಶೋಧನಾ ವರದಿಯನ್ನು ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆ ಇದೆ ಎಂದು ಕವಿತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮೊದಲ ಆಕರವಾಗಿ 70 ಕನ್ನಡ ಚಲನಚಿತ್ರಗಳನ್ನು ಪರಾಮರ್ಶಿಸಿ ಸಂಶೋಧನೆ ನಡೆಸಿರುವ ಪೊಲೀಸ್ ಅಧಿಕಾರಿ ಬಿ.ಟಿ.ಕವಿತಾ ಅವರು ಪೊಲೀಸ್ ಇಲಾಖೆ ಕುರಿತ ಪುಸ್ತಕಗಳನ್ನು ಪರಾಮರ್ಶನ ಗ್ರಂಥಗಳಾಗಿ ಬಳಸಿಕೊಂಡಿದ್ದಾರೆ.
ಸಿನಿಮಾ ಜನರನ್ನು ವೇಗವಾಗಿ ತಲುಪುವ ಮಾಧ್ಯಮ. ಕೆಲ ಚಿತ್ರಗಳಲ್ಲಿ ನಾಯಕನಿದ್ದಾಗ ವೈಭವೀಕರಿಸುವುದು, ಖಳನಾಯಕನಾಗಿದ್ದಾಗ ನಕಾರಾತ್ಮಕವಾಗಿಯೂ ಬಿಂಬಿಸಲಾಗಿದೆ. ಜತೆಗೆ ವಾಸ್ತವಕ್ಕೆ ವಿರುದ್ಧವಾದ ಪಾತ್ರವನ್ನು ಕಟ್ಟಲಾಗಿದೆ. ಈ ನಿಟ್ಟಿನಲ್ಲಿ ಸ್ಲಂ ಬಾಲ’ ಹಾಗೂ ಕೆಂಡಸಂಪಿಗೆ’ ಚಿತ್ರಗಳು ಹೆಚ್ಚು ಕಾಡಿದ್ದವು ಎಂದು ಹೇಳಿದರು.
DCP Kavitha receives Ph.D. at 101st UoM Convocation
Mysuru, September 7, 2021 (www.justkannada.in): A woman police officer of Mysuru District received Ph.D. at the 101st Convocation of the University of Mysore today.
The University of Mysore has accorded Ph.D. to her thesis on the subject, “Representation of Police in Kannada movies: A Cultural Study.” Kavitha is presently serving as DCP, at the DCRE wing. She took five years to complete the Ph.D. and this is the first thesis on the subject.
Speaking on the occasion the officer informed that her husband R. Nagashayana, who is serving as the Superintendent, in the Excise Department, placed in Chitradurga District and her guide Dr. N.K. Lolakshi, of the Kuvempu Kannada Study Center, helped her a lot in completing the thesis. “The police department also cooperated a lot. I intend to bring my research work in the form of a book,” she informed.
B.T. Kavitha has analyzed 70 Kannada movies to carry out her research work and also referred to various books on Police Department for her study.
Keywords: University of Mysore/ 101st Convocation/ DCP/ B.T. Kavitha/ Ph.D.
Key words: mysore-DCP- Kavitha- Ph.D. -graduate –mysore- university- 101st convocation.