ಮೈಸೂರು,ನವೆಂಬರ್3,2020(www.justkannada.in): ಕೆರೆಯಲ್ಲಿ ಮುಳುಗಿ ಭಾವ ಭಾವಮೈದುನ ಇಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಹೆಚ್. ಡಿ. ಕೋಟೆ ತಾಲ್ಲೂಕಿನ ಹೊಸಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ. ಪ್ರಸನ್ನ (25) ಮತ್ತು ನಿಂಗರಾಜು (35) ಮೃತಪಟ್ಟವರು ತನ್ನ ತಂದೆಗೆಯೊಂದಿಗೆ ಜಗಳವಾಡಿದ್ದ ಪ್ರಸನ್ನ ಬಳಿಕ ಆತ್ಮಹತ್ಯೆಗೆ ನಿರ್ಧರಿಸಿ ಕೆರೆಗೆ ಹಾರಿದ್ದನು. ಈ ವೇಳೆ ಮುಳುಗುತ್ತಿದ್ದ ಪ್ರಸನ್ನ ನನ್ನು ರಕ್ಷಿಸಲು ಮುಂದಾಗಿ ಭಾವ ನಿಂಗರಾಜು ಸಹ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನುರಿತ ಈಜುಗಾರರರು ಮೃತ ದೇಹವನ್ನ ಹೊರ ತೆಗೆದಿದ್ದಾರೆ. ಈ ಕುರಿತು ಹೆಚ್. ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: mysore- death- two-lake- Drowning-hd kote