ಮೈಸೂರು,ಡಿಸೆಂಬರ್,23,2020(www.justkannada.in): ನೀವೇನಾದ್ರೂ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಿಮ್ಮ ವಾಹನಗಳನ್ನ ಪಾರ್ಕ್ ಮಾಡ್ತೀರಾ..? ಗಂಟೆಗಟ್ಟಲೆ ನಿಮ್ಮ ವಾಹನಗಳನ್ನ ಪಾರ್ಕ್ ಮಾಡಿ ಸುತ್ತಾಡೋಕೆ ಹೋಗ್ತೀರಾ..? ದೇವರಾಜ ಅರಸು ರಸ್ತೆಯಲ್ಲಿ ಪಾರ್ಕಿಂಗ್ ಮಾಡೋ ಮುನ್ನ ನಿಮ್ಮ ಜೇಬು ಗಟ್ಟಿ ಇರಲಿ. 4 ಗಂಟೆಗಳಿಗೂ ಹೆಚ್ಚು ಕಾಲ ವಾಹನ ಪಾರ್ಕ್ ಮಾಡಿದರೇ ಬೀಳುತ್ತೆ ಫೈನ್.
ಹೌದು ಇಂತಹದೊಂದು ಹೊಸ ನಿಯಮ ಜಾರಿಗೆ ಮೈಸೂರು ನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ದೇವರಾಜು ರಸ್ತೆ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು ಈ ಹೊಸ ನಿಯಮ ಜಾರಿ ಮಾಡಲು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದು, ಹೊಸ ನಿಯಮ ಜಾರಿಗೆ ಕುರಿತು ನಗರ ಪೊಲೀಸ್ ಕಮಿಷನರ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹೀಗಾಗಿ ನಿಯಮ ಜಾರಿಗೆ ಬಂದರೇ ದೇವರಾಜ ಅರಸು ರಸ್ತೆಯಲ್ಲಿ ಕೇವಲ 4 ಗಂಟೆಗಳಷ್ಟೆ ಪಾರ್ಕ್ ಮಾಡಲು ಅವಕಾಶ ನೀಡಲಾಗುತ್ತದೆ. 4 ಗಂಟೆಗಳಿಂದ ಹೆಚ್ಚು ಸಮಯ ಪಾರ್ಕ್ ಮಾಡಿದ್ದಲ್ಲಿ ಪೊಲೀಸರು ದಂಡ ವಿಧಿಸಲಿದ್ದಾರೆ. ಕೇವಲ ನಾಲ್ಕು ಚಕ್ರದ ವಾಹನಗಳಿಗಳಿಗಷ್ಟೇ ಹೊಸ ನಿಯಮ ಜಾರಿ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Key words: mysore- devaraj urs-road-fine – park – 4 hours.